ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಲೋಧಾ ಸಮಿತಿಯನ್ನು ನಕಲಿ ಎಂದು ಕರೆದಿದ್ದು, ಬಿಸಿಸಿಐ ಮೇಲೆ ಸುಪ್ರೀಂಕೋರ್ಟ್ ಸುಧಾರಣೆಗಳನ್ನು ಹೇರುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟರು.
ಈ ವಿಷಯವನ್ನು ಸುಪ್ರೀಂಕೋರ್ಟ್ ಲೋಧಾ ಸಮಿತಿ ಶಿಫಾರಸುಗಳೊಂದಿಗೆ ಸಂಸತ್ತಿಗೆ ಕಳಿಸಬೇಕಿತ್ತು. ಇದರಿಂದ ಸಂಸತ್ತು ಅಗತ್ಯಬಿದ್ದರೆ ಕಾನೂನನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ನ್ಯಾ. ಕಾಟ್ಜು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.
ಈ ಆದೇಶವು ರಾಜ್ಯ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ. ಸಂವಿಧಾನದ 19ನೇ ವಿಧಿಯ ಹಕ್ಕುಗಳಿಗೆ ಇದು ಉಲ್ಲಂಘನೆಯಾಗುತ್ತದೆ ಎಂದು ವರದಿಯಲ್ಲಿ ಗಮನಸೆಳೆಯಲಾಗಿದೆ.
ಸುಪ್ರೀಂಕೋರ್ಟ್ ಕ್ರಮ ಅಸಂವಿಧಾನಿಕ ಮತ್ತು ಕಾನೂನುಬಾಹಿರ. ಸಂವಿಧಾನದ ತತ್ವಗಳನ್ನು ಈ ಆದೇಶದಲ್ಲಿ ಉಲ್ಲಂಘಿಸಲಾಗಿದೆ. ನಮ್ಮ ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವಿದೆ. ಕಾನೂನು ರೂಪಿಸುವುದು ಶಾಸಕಾಂಗದ ಕರ್ತವ್ಯ. ಕಾರ್ಯಾಂಗ ಕಾನೂನನ್ನು ರೂಪಿಸಲಾರಂಭಿಸಿದರೆ, ಅಪಾಯಕಾರಿ ಪೂರ್ವನಿದರ್ಶನ ಹಾಕಿಕೊಟ್ಟಂತಾಗುತ್ತದೆ ಎಂದು ಕಾಟ್ಜು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ