ಸಾರಾ ಜೋಸ್ಟ್ರಾಮ್ 100 ಮೀ ಬಟರ್‌ಫ್ಲೈ ಈಜು ಸ್ಪರ್ಧೆಯಲ್ಲಿ ತಮ್ಮದೇ ವಿಶ್ವದಾಖಲೆ ಮುರಿದು ಈಜಿನಲ್ಲಿ ಒಲಿಂಪಿಕ್ ಚಿನ್ನದ ಪದಕಕ್ಕೆ ಪಾತ್ರರಾಗಿದ್ದಾರೆ. ಕೆನಡಾದ ಪೆನ್ನಿ ಒಲೆಕ್‌ಸಿಯಾಕ್ ಬೆಳ್ಳಿ ಪದಕವನ್ನು ಗೆದ್ದಿದ್ದರೆ ಅಮೆರಿಕದ ಹಾಲಿ ಚಾಂಪಿಯನ್ ಡಾನಾ ವೋಲ್ಮರ್ ಕಂಚಿನ ಪದಕ ಗೆದ್ದರು.
ಈ ಈವೆಂಟ್‌ನಲ್ಲಿ ಮೂರು ಬಾರಿ ವಿಶ್ವ ಚಾಂಪಿಯನ್ನರಾಗದಿದ್ದ ಜೋಸ್ಟ್ರಾಮ್ ತಮ್ಮ 55. 64 ಸೆಕೆಂಡುಗಳ ಹಿಂದಿನ ದಾಖಲೆಯನ್ನು ಮುರಿದು 55. 48 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.
22 ವರ್ಷದ ಸ್ವೀಡನ್ ಈಜುಪಟು ಮೂರನೇ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದು ಇದು ಅವರ ಮೊಟ್ಟಮೊದಲ ಒಲಿಂಪಿಕ್ ಪದಕವಾಗಿದೆ. ಜೋಸ್ಟ್ರಾಮ್ 50, 100 ಮತ್ತು 200 ಮೀಟರ್ ಫ್ರೀಸ್ಟೈಲ್‌ನಲ್ಲಿ ಕೂಡ ಭಾಗವಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ