Select Your Language

Notifications

webdunia
webdunia
webdunia
webdunia

ರಿಯೋ ಓಲಂಪಿಕ್ಸ್ ವಿಜೇತೆ ಸಾಕ್ಷಿಗೆ ಸದ್ಯದಲ್ಲೇ ಮದುವೆ

ರಿಯೋ ಓಲಂಪಿಕ್ಸ್ ವಿಜೇತೆ ಸಾಕ್ಷಿಗೆ ಸದ್ಯದಲ್ಲೇ ಮದುವೆ
ನವದೆಹಲಿ , ಮಂಗಳವಾರ, 30 ಆಗಸ್ಟ್ 2016 (17:48 IST)
ರಿಯೋ ಓಲಂಪಿಕ್ಸ್‌ನಲ್ಲಿ ಕಂಚಿನ ಸಾಧನೆಗೈದು ದೇಶಕ್ಕೆ ಕೀರ್ತಿ ತಂದ ಕುಸ್ತಿ ಪಟು ಸಾಕ್ಷಿ ಮಲಿಕ್‌ಗೆ ವಿವಾಹ ಯೋಗ ಕೂಡಿ ಬಂದಿದೆ. 
ರಾಷ್ಟ್ರೀಯ ದೈನಿಕವೊಂದರ ಜತೆ ಮಾತನ್ನಾಡುತ್ತಿದ್ದ 23ರ ಸಾಕ್ಷಿ ತನ್ನ ಭಾವಿ ಪತಿಯ ಹೆಸರನ್ನು ಬಹಿರಂಗ ಪಡಿಸಲು ಒಪ್ಪಲಿಲ್ಲ. ಆದರೆ ಈ ವರ್ಷವೇ ತಾವು ಮದುವೆಯಾಗುವುದಾಗಿ ಹೇಳಿದ ಅವರು, ಮದುವೆ ಟೋಕಿಯೋ ಓಲಂಪಿಕ್ಸ್ ತಯಾರಿಗೆ ಯಾವುದೇ ಅಡ್ಡಿಯನ್ನುಂಟು ಮಾಡಲಾರದು ಎಂದಿದ್ದಾರೆ. 
 
ಆತ ಬಹಳ ಬೆಂಬಲ ನೀಡುತ್ತಾನೆ. ನನ್ನ ಕನಸನ್ನು ತನ್ನ ಕನಸೆಂದು ಕೊಂಡಿದ್ದಾನೆ. ಮದುವೆ ನಂತರ ನಾನು ಉತ್ತಮ ಸ್ನೇಹಿತನನ್ನು ಪಡೆಯಲಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. 
 
ಈ ಬಾರಿಯ ಓಲಂಪಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟ ಸಾಕ್ಷಿಗೆ ತವರಿನಲ್ಲಿ ಅದ್ದೂರಿಯ ಸ್ವಾಗತವನ್ನು ನೀಡಲಾಗಿತ್ತು. 

Share this Story:

Follow Webdunia kannada

ಮುಂದಿನ ಸುದ್ದಿ

ಪಿತೃತ್ವವನ್ನು ಆಹ್ಲಾದಿಸುತ್ತಿರುವ ಹರಭಜನ್ ಸಿಂಗ್- ರೈನಾ