ಸೈನಾ ನೆಹ್ವಾಲ್-ಸಿಂಧು ನಡುವೆ ಕೋಲ್ಡ್ ವಾರ್!

Webdunia
ಭಾನುವಾರ, 31 ಡಿಸೆಂಬರ್ 2017 (09:37 IST)
ಹೈದರಾಬಾದ್: ಭಾರತೀಯ ಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಇಬ್ಬರೂ ಎರಡು ಮಿನುಗುವ ನಕ್ಷತ್ರಗಳಿದ್ದಂತೆ. ಇಬ್ಬರೂ ಮಹಿಳಾ ಕ್ರೀಡಾಪಟುಗಳಿಗೆ ಹೊಸ ಹುರುಪು ತಂದವರು.
 

ಆದರೆ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಇಬ್ಬರ ನಡುವಿನ ಶೀತಲ ಸಮರದ ಬಗ್ಗೆ ಸ್ವತಃ ಸಿಂಧು ಮಾತನಾಡಿದ್ದಾರೆ. ನಿಜವಾಗಿ ನಿಮ್ಮಿಬ್ಬರ ನಡುವೆ ಸ್ನೇಹ ಇದೆಯಾ ಎಂದಿದ್ದಕ್ಕೆ ಪ್ರತಿಕ್ರಿಯಿಸಿರುವ ಸಿಂಧು ‘ನಾವಿಬ್ಬರೂ ಗಂಟೆಗಟ್ಟಲೆ ಜತೆ ಕೂತುಕೊಂಡು ಹರಟುವ ಸ್ನೇಹಿತರಲ್ಲ. ಜಸ್ಟ್ ಹಾಯ್.. ಬಾಯ್ ಅಷ್ಟೇ ನಮ್ಮ ನಡುವೆ ಇರುವುದು’ ಎಂದಿದ್ದಾರೆ.

ಹಾಗಿದ್ದರೆ ಇವರಿಬ್ಬರ ನಡುವಿನ ಶೀತಲ ಸಮರದ ಸುದ್ದಿ ಸುಳ್ಳೇ ಎಂದರೆ ‘ಹಾಗೇನೂ ಇಲ್ಲ. ಒಂದು ಕಾಲದಲ್ಲಿ ಕೆಲವು ಸಮಸ್ಯೆಗಳಿದ್ದವು.  ಆದರೆ ಅದು ದೊಡ್ಡ ವಿಷಯವಲ್ಲ. ಆದರೆ ಅದನ್ನೇ ಜನ ತಪ್ಪಾಗಿ ತಿಳಿದುಕೊಂಡರು’ ಎಂದು ಸಿಂಧು ಹೇಳಿದ್ದಾರೆ.

ಪ್ರಸಕ್ತ ಇಬ್ಬರೂ ಹೈದರಾಬಾದ್ ನ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಹಾಗಿದ್ದರೂ ನಾವು ತರಬೇತಿ ಸಂದರ್ಭದಲ್ಲಿ ಭೇಟಿಯಾಗುತ್ತೇವೆ. ಆದರೂ ಮಾತನಾಡುವಷ್ಟು ಪುರುಸೊತ್ತು ನಮಗಿರುವುದಿಲ್ಲ. ನಮ್ಮದೇ ಅಭ್ಯಾಸದಲ್ಲಿ ನಾವು ಬ್ಯುಸಿ’ ಎಂದು ಸಿಂಧು ಸ್ನೇಹನೂ ಇಲ್ಲ, ಶತ್ರುಗಳೂ ಅಲ್ಲ ಎಂಬಂತೆ ಮಾತನಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತಕ್ಕೆ ಬಂದ ಲಿಯೋನೆಲ್ ಮೆಸ್ಸಿಗಾಗಿ ಹನಿಮೂನ್ ಕ್ಯಾನ್ಸಲ್ ಮಾಡಿದ ನವವಿವಾಹಿತರು

Video: ಪಂದ್ಯ ಮುಗಿದರೂ ಇಳಿಯದ ಗಂಭೀರ್ ಸಿಟ್ಟು: ದ್ರಾವಿಡ್ ಹೀಗರ್ಲಿಲ್ಲ ಎಂದ ಫ್ಯಾನ್ಸ್

ಒಂದೇ ಓವರ್ ನಲ್ಲಿ 7 ವೈಡ್ ಎಸೆದ ಅರ್ಷ್ ದೀಪ್ ಸಿಂಗ್: ಗಂಭೀರ್ ಹೊಡೆಯೋದೊಂದೇ ಬಾಕಿ video

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ

ಟೀಂ ಇಂಡಿಯಾ ಎಲ್ಲಾ ಕ್ರಿಕೆಟಿಗರಿಗೂ ಬೇಡದ ಅಭ್ಯಾಸಗಳೆಲ್ಲಾ ಇದೆ: ವಿವಾದಕ್ಕೆ ಕಾರಣವಾದ ರವೀಂದ್ರ ಜಡೇಜಾ ಪತ್ನಿ

ಮುಂದಿನ ಸುದ್ದಿ
Show comments