2015ರಲ್ಲಿ ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದಿಂದ ವರ್ಷದ ಗೋಲ್‌ಕೀಪರ್ ಗೌರವ ಪಡೆದ ಶ್ರೀಜೇಶ್ ಅವರನ್ನು ಹಾಲೆಂಡ್‌ನ ಜಾಪ್ ಸ್ಟಾಕ್‌ಮ್ಯಾನ್ ಟಾಪ್ 5 ಹಾಕಿ ಗೋಲುರಕ್ಷಕರಲ್ಲಿ ಒಬ್ಬರು ಎಂದು ಹೊಗಳಿದ್ದರು. 28 ವರ್ಷದ ಹಾಕಿಪಟು ಕಳೆದ ಅನೇಕ ವರ್ಷಗಳಿಂದ ಈ ಖ್ಯಾತಿಯನ್ನು ಉಳಿಸಿಕೊಂಡಿದ್ದಾರೆ.
ಭಾರತದ ಹಾಕಿ ತಂಡ ರಿಯೊಗೆ ತೆರಳಿದಾಗ ನಾವು ನಿಮ್ಮನ್ನು ಕೈಬಿಡುವುದಿಲ್ಲ, ರಿಯೋದಲ್ಲಿ ಏನಾದರೂ ಸಾಧಿಸಲು ನಾವು ಶ್ರಮ ಪಡುತ್ತೇವೆ ಎಂದು ಹೇಳಿದರು.
ಭಾರತ 36 ವರ್ಷಗಳಿಂದ ಒಲಿಂಪಿಕ್ ಹಾಕಿ ಪದಕ ಗೆದ್ದಿಲ್ಲ. ಆದರೆ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಬೆಳ್ಳಿಪದಕ ವಿಜೇತರಾಗಿ ರಿಯೋಗೆ ತೆರಳುತ್ತಿದೆ. 1980ರ ಒಲಿಂಪಿಕ್ಸ್ ಬಳಿಕ ವಿಶ್ವಕ್ರೀಡಾಕೂಟದಲ್ಲಿ ಇದು ಶ್ರೇಷ್ಟ ಸಾಧನೆಯಾಗಿದೆ.
ಶ್ರೀಜೇಶ್ ಭಾರತ ತಂಡದ ನಾಯಕತ್ವ ವಹಿಸಿ ಪದಕ ಗೆಲ್ಲಿಸಿಕೊಟ್ಟರು. ಮಾಜಿ ನಾಯಕ ಸರ್ದಾರ್ ಸಿಂಗ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಶ್ರೀಜೇಶ್ ರಿಯೋ ಒಲಿಂಪಿಕ್ಸ್ ಕುರಿತು ಮಾತನಾಡುತ್ತಾ, ನಾವು ಪೆನಾಲ್ಟಿ ಕಾರ್ನರ್ ಪರಿವರ್ತನೆಗಳು ಮತ್ತು ಪೆನಾಲ್ಟಿ ಕಾರ್ನರ್ ಗೋಲುಗಳನ್ನು ಮೊನಚುಗೊಳಿಸಬೇಕು. ಇವುಗಳಿಗೆ ಹೊಳಪು ನೀಡಿದರೆ, ನಮಗೆ ಮನ್ನಣೆ ಸಿಗುತ್ತದೆ ಎಂದು ಹೇಳಿದರು.
2006ರಲ್ಲಿ ಪದಾರ್ಪಣೆ ಮಾಡಿದಾಗಿನಿಂದ ಶ್ರೀಜೇಶ್ 2014ರ ಕಾಮನ್‌ವೆಲ್ತ್ ಕ್ರೀಡಾಕೂಟದ ಬೆಳ್ಳಿಪದಕ, ಅದೇವರ್ಷ ಏಷ್ಯನ್ ಗೇಮ್ಸ್ ಚಿನ್ನ ಮತ್ತು 2015ರ ಹಾಕಿ ವಿಶ್ವ ಲೀಗ್ ಕಂಚಿನ ಪದಕ ಗೆದ್ದ ತಂಡದ ಭಾಗವಾಗಿದ್ದರು. 2014ರಲ್ಲಿ ಅವರು ಶ್ರೇಷ್ಟ ಗೋಲುರಕ್ಷಕ ಎಂದು ಎಫ್ಐಎಚ್‌ನಿಂದ ಮಾನ್ಯತೆ ಪಡೆದಿದ್ದರು.