Select Your Language

Notifications

webdunia
webdunia
webdunia
webdunia

ಶ್ರೀಲಂಕಾ ವಿರುದ್ಧ ಆಸೀಸ್ ಏಕದಿನ: ಹೆನ್ರಿಕ್ ಸೇರ್ಪಡೆ, ಮ್ಯಾಕ್ಸ್‌ವೆಲ್ ಔಟ್

ಶ್ರೀಲಂಕಾ ವಿರುದ್ಧ ಆಸೀಸ್ ಏಕದಿನ:   ಹೆನ್ರಿಕ್ ಸೇರ್ಪಡೆ, ಮ್ಯಾಕ್ಸ್‌ವೆಲ್ ಔಟ್
ಸಿಡ್ನಿ: , ಸೋಮವಾರ, 1 ಆಗಸ್ಟ್ 2016 (18:47 IST)
ಆಸ್ಟ್ರೇಲಿಯಾ ಆಯ್ಕೆದಾರರು ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯಕ್ಕೆ  ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಕೈಬಿಟ್ಟು ಮಾಯ್ಸಿಸ್ ಹೆನ್ರಿಕ್ಸ್ ಮತ್ತು ಶಾನ್ ಮಾರ್ಶ್ ಅವರನ್ನು ಸೇರ್ಪಡೆ ಮಾಡಿದ್ದಾರೆ. ತಮ್ಮ ಪ್ರಥಮ ಪುತ್ರನ ಜನನದ ನಂತರ ತಂಡಕ್ಕೆ ಸೇರುತ್ತಿರುವ ಮಾರ್ಶ್ 15 ಮಂದಿ ಏಕದಿನ ತಂಡದಲ್ಲಿ ಮಿಚೆಲ್ ಅವರನ್ನು ಸೇರಿದ್ದಾರೆ.
 
 ಗ್ಲೆನ್ ಮ್ಯಾಚ್ ವಿನ್ನರ್ ಆಗಿದ್ದರೂ ಕೂಡ ಅವರ ಪ್ರಸಕ್ತ ಫಾರಂನಿಂದ ಆಯ್ಕೆಗೆ ಸೂಕ್ತರಾಗಿಲ್ಲ ಎಂದು ಮುಖ್ಯ ಆಯ್ಕೆದಾರ ರಾಡ್ ಮಾರ್ಶ್ ತಿಳಿಸಿದರು. ಆಸ್ಟ್ರೇಲಿಯಾದ ಕಳೆದ 10 ಏಕದಿನ ಪಂದ್ಯಗಳಲ್ಲಿ ಅವರ ಸರಾಸರಿ 10ರನ್‌ಗಿಂತ ಕಡಿಮೆಯಿದೆ ಎಂದೂ ಅವರು ಹೇಳಿದರು.
 
ಹೆನ್ರಿಕ್ಸ್ ಐಪಿಎಲ್‌ನಲ್ಲಿ ಒಳ್ಳೆಯ ಫಾರಂನಲ್ಲಿದ್ದರು. ಇಂತಹ ಪರಿಸ್ಥಿತಿಗೆ ಅವು ಚೆನ್ನಾಗಿ ಹೊಂದಿಕೊಳ್ಳುತ್ತಾರೆಂದು ಭಾವಿಸುವುದಾಗಿ ಮಾರ್ಶ್ ಹೇಳಿದರು. ಆಸ್ಟ್ರೇಲಿಯಾ ಶ್ರೀಲಂಕಾ ವಿರುದ್ದ ಐದು ಏಕದಿನ ಪಂದ್ಯಗಳನ್ನು ಆಡಲಿದ್ದು, ಆಗಸ್ಟ್ 21ರಿಂದ ಆರಂಭವಾಗಲಿದೆ.
 
ಸ್ಟೀವ್ ಸ್ಮಿತ್ (ನಾಯಕ), ಡೇವಿಡ್ ವಾರ್ನರ್, ಜಾರ್ಜ್ ಬೈಲಿ, ನಥನ್ ಕೌಲ್ಟರ್ ನೈಲ್, ಜೇಮ್ಸ್ ಫಾಕ್ನರ್, ಆರನ್ ಫಿಂಚ್, ಜೋಶ್ ಹ್ಯಾಜಲ್‌ವುಡ್, ಮೊಯ್ಸಿಸ್ ಹೆನ್ರಿಕ್ಸ್, ಉಸ್ಮಾನ್ ಖ್ವಾಜಾ, ಮಿಚೆಲ್ ಮಾರ್ಷ್, ಶಾನ್ ಮಾರ್ಷ್, ನಥಾನ್ ಲಿನ್, ಮಿಚೆಲ್ ಸ್ಟಾರ್ಕ್, ಮ್ಯಾಥ್ಯೂ ವೇಡ್, ಆಡಮ್ ಜಾಂಪಾ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನೀಲ್ ವಾಗ್ನರ್ ಮಾರಕ ಬೌಲಿಂಗ್: ನ್ಯೂಜಿಲೆಂಡ್‌ಗೆ ಜಿಂಬಾಬ್ವೆ ವಿರುದ್ಧ ಇನ್ನಿಂಗ್ಸ್ ಗೆಲುವು