Select Your Language

Notifications

webdunia
webdunia
webdunia
webdunia

ನೀಲ್ ವಾಗ್ನರ್ ಮಾರಕ ಬೌಲಿಂಗ್: ನ್ಯೂಜಿಲೆಂಡ್‌ಗೆ ಜಿಂಬಾಬ್ವೆ ವಿರುದ್ಧ ಇನ್ನಿಂಗ್ಸ್ ಗೆಲುವು

ನೀಲ್ ವಾಗ್ನರ್ ಮಾರಕ ಬೌಲಿಂಗ್: ನ್ಯೂಜಿಲೆಂಡ್‌ಗೆ ಜಿಂಬಾಬ್ವೆ ವಿರುದ್ಧ ಇನ್ನಿಂಗ್ಸ್ ಗೆಲುವು
ಬುಲಾವಾಯೊ , ಸೋಮವಾರ, 1 ಆಗಸ್ಟ್ 2016 (18:06 IST)
ನ್ಯೂಜಿಲೆಂಡ್ ತಂಡವು ಜಿಂಬಾಬ್ವೆ ವಿರುದ್ಧ ಭಾನುವಾರ ಆಡಿದ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಗೆಲುವು ದಾಖಲಿಸಿದೆ. ನ್ಯೂಜಿಲೆಂಡ್ ತಂಡ ಜಿಂಬಾಬ್ವೆಯನ್ನು ಎರಡನೇ ಇನ್ನಿಂಗ್ಸ್‌ನಲ್ಲಿ 295 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಇನ್ನಿಂಗ್ಸ್ ಮತ್ತು 117 ರನ್‌ಗಳಿಂದ ಜಯಗಳಿಸಿದೆ.

ಎಡಗೈ ವೇಗಿ ನೀಲ್ ವಾಗ್ನರ್ ಮಾರಕ ಬೌಲಿಂಗ್ ದಾಳಿಯ ಮೂಲಕ 8 ವಿಕೆಟ್ ಕಬಳಿಸಿದರು.  ಪ್ರವಾಸಿ ತಂಡ ಮೂರು ದಿನಗಳು ಮೇಲುಗೈ ಸಾಧಿಸಿದ ಬಳಿಕ ಹಾಸಿಗೆ ಹಿಡಿದಿದ್ದ ವಿಲಿಯಮ್ಸ್ ಆಡಲಿಳಿದು ಅತೀ ವೇಗದ ಟೆಸ್ಟ್ ಶತಕವನ್ನು 106 ಎಸೆತಗಳಲ್ಲಿ ಸಿಡಿಸಿದರು. 

ಎಡಗೈ ಆಟಗಾರ ಅಸ್ವಸ್ಥತೆಯಿಂದ ಕಳೆದ ಎರಡು ದಿನಗಳಿಂದ ಮೈದಾನದಿಂದ ಹೊರಗುಳಿದಿದ್ದರು. ನಾಲ್ಕನೇ ದಿನ ಜಿಂಬಾಬ್ವೆ 124ಕ್ಕೆ 6 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದಾಗ ಏಳನೇ ವಿಕೆಟ್‌‍ಗೆ ನಾಯಕ ಗ್ರೇಮ್ ಕ್ರೇಮರ್ ಜತೆ 118 ರನ್ ಸೇರಿಸಿದರು. ಕೇವಲ 106 ಎಸೆತಗಳಲ್ಲಿ ಅತೀ ವೇಗದ 119 ರನ್ ಸಿಡಿಸಿ ಮಿಚೆಲ್ ಸ್ಯಾಂಟನರ್ ಬೌಲಿಂಗ್‌ಗೆ ಔಟಾದರು.
 
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್: 576ಕ್ಕೆ 6 ವಿಕೆಟ್
ಬ್ಯಾಟಿಂಗ್ ವಿವರ ಟಾಮ್ ಲಾಥಮ್ 105, ರೋಸ್ ಟೇಲರ್ 173, ವಾಟಿಂಗ್ 107 
ಬೌಲಿಂಗ್ ವಿವರ
ಡೊನಾಲ್ಡ್ ತಿರಿಪಾನೊ 6 ವಿಕೆಟ್, ಮಾಸ್‌ವಾರೆ  4ವಿಕೆಟ್
ಜಿಂಬಾಬ್ವೆ ಮೊದಲ ಇನ್ನಿಂಗ್ಸ್ 164ಕ್ಕೆ 10 ವಿಕೆಟ್
 ಬೌಲಿಂಗ್ ವಿವರ
ನೇಲ್ ವಾಗ್ನರ್ 6 ವಿಕೆಟ್,  ಟಿಮ್ ಸೌತಿ 2 ವಿಕೆಟ್
 ಜಿಂಬಾಬ್ವೆ ಎರಡನೇ ಇನ್ನಿಂಗ್ಸ್ 295ಕ್ಕೆ ಆಲೌಟ್
ಇನ್ನಿಂಗ್ಸ್ ಮತ್ತು 117 ರನ್‌ಗಳಿಂದ ನ್ಯೂಜಿಲೆಂಡ್‌ಗೆ ಜಯ 

Share this Story:

Follow Webdunia kannada

ಮುಂದಿನ ಸುದ್ದಿ

ಲಿಂಗ ತಾರತಮ್ಯವೇ: ಹಾಕಿಯ ಇಬ್ಬರು ಮಾಜಿ ನಾಯಕರ ಭಿನ್ನವಾದ ಕಥೆ