Select Your Language

Notifications

webdunia
webdunia
webdunia
webdunia

ಒಲಿಪಿಂಕ್ಸ್ ಸೋಲಿನ ಸೇಡು ತೀರಿಸಿಕೊಂಡ ಪಿ.ವಿ. ಸಿಂಧು ಈಗ ವರ್ಲ್ಡ್ ಚಾಂಪಿಯನ್

ಒಲಿಪಿಂಕ್ಸ್ ಸೋಲಿನ ಸೇಡು ತೀರಿಸಿಕೊಂಡ ಪಿ.ವಿ. ಸಿಂಧು ಈಗ ವರ್ಲ್ಡ್ ಚಾಂಪಿಯನ್
ನವದೆಹಲಿ , ಭಾನುವಾರ, 2 ಏಪ್ರಿಲ್ 2017 (22:19 IST)
ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆ ಒಲಿಂಪಿಕ್ಸ್  ಸಿಲ್ವರ್ ಮೆಡಲ್ ವಿನ್ನರ್ ಪಿ.ವಿ. ಸಿಂಧು ಇಂಡಿಯನ್ ಸೂಪರ್ ಸೀರಿಸ್ ಗೆದ್ದಿದ್ದಾರೆ.

ನವದೆಹಲಿಯ ಸಿರಿ ಪೋರ್ಟ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಒಲಿಂಪಿಕ್ಸ್ ಫೈನಲ್`ನಲ್ಲಿ ತಮ್ಮನ್ನ ಸೋಲಿಸಿದ್ದ ಸ್ಪೇನ್`ನ ಕರೋಲಿನಾ ಮರಿನ್ ಅವರನ್ನ 21-16 ಮತ್ತು 21-14 ನೇರ ಸೆಟ್`ಗಳಿಂದ ಮಣಿಸಿದ ಸಿಂಧು ಪ್ರಶಸ್ತಿ ಮುಡಿಗೇರಿಸಿಕೊಂಡರು. ಈ ಮೂಲಕ ಒಲಿಪಿಂಕ್ಸ್ ಫೈನಲ್ ಸೋಲಿನ ಸೇಡನ್ನೂ ತೀರಿಸಿಕೊಂಡರು.

ಸೆಮಿಫೈನಲ್`ನಲ್ಲಿ ವಿಶ್ವದ ನಂ. 4 ಶ್ರೇಯಾಂಕಿತೆ ಕೊರಿಯಾದ ಸಂಗ್ ಜಿ ಹ್ಯೂನ್ ಅವರನ್ನ ಮಣಿಸಿದ್ದ ಪಿ.ವಿ. ಸಿಂಧು ಕ್ವಾರ್ಟರ್`ನಲ್ಲಿ ಸೈನಾ ನೆಹ್ವಾಲ್ ಅವರನ್ನ ಮಣಿಸಿದ್ದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಮೈದಾನದಲ್ಲಿ ಪ್ರಜ್ಞೆ ತಪ್ಪಿದಂತೆ ನಾಟಕ ಮಾಡಿ ಸಿಕ್ಕಿ ಬಿದ್ದ ಪಾಕ್ ಕ್ರಿಕೆಟಿಗ!