Select Your Language

Notifications

webdunia
webdunia
webdunia
webdunia

ಮೈದಾನದಲ್ಲಿ ಪ್ರಜ್ಞೆ ತಪ್ಪಿದಂತೆ ನಾಟಕ ಮಾಡಿ ಸಿಕ್ಕಿ ಬಿದ್ದ ಪಾಕ್ ಕ್ರಿಕೆಟಿಗ!

ಮೈದಾನದಲ್ಲಿ ಪ್ರಜ್ಞೆ ತಪ್ಪಿದಂತೆ ನಾಟಕ ಮಾಡಿ ಸಿಕ್ಕಿ ಬಿದ್ದ ಪಾಕ್ ಕ್ರಿಕೆಟಿಗ!
Trinidad , ಭಾನುವಾರ, 2 ಏಪ್ರಿಲ್ 2017 (10:42 IST)
ಟ್ರಿನಿಡಾಡ್: ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿದ್ದ ಟಿ20 ಪಂದ್ಯ ನಾಟಕೀಯ ದೃಶ್ಯಕ್ಕೆ ಸಾಕ್ಷಿಯಾಯಿತು. ಪಾಕ್ ಕ್ರಿಕೆಟಿಗ ಶೆಹಜಾದ್ ಪ್ರಜ್ಞೆ ತಪ್ಪಿದಂತೆ ನಾಟಕವಾಡಿ ಸಿಕ್ಕಿಬಿದ್ದಿದ್ದಾರೆ.

 

ವಿಂಡೀಸ್ ಬ್ಯಾಟ್ಸ್ ಮನ್ ವಾಲ್ಟನ್ ಗೆ ಡಿಕ್ಕಿ ಹೊಡೆದ ಶೆಹಜಾದ್ ಪ್ರಜ್ಞೆ ತಪ್ಪಿದವರಂತೆ ಬಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ವೈದ್ಯಕೀಯ ತಂಡ ಅವರನ್ನು ಮೈದಾನದಿಂದ ಹೊತ್ತೊಯ್ದಿತು. ನಂತರ ಪರೀಕ್ಷಿಸಿದಾಗ ಅವರು ಸಂಪೂರ್ಣ ಆರೋಗ್ಯವಾಗಿದ್ದಾರೆಂದು ದೃಢವಾಯಿತು.

 
ಇದೀಗ ಶೆಹಜಾದ್ ಪ್ರಹಸನವನ್ನು ಪಾಕ್ ಕ್ರಿಕೆಟಿಗರೇ ಟೀಕಿಸಿದ್ದಾರೆ. ನಿನ್ನ ನಾಟಕಕ್ಕೆ ಆಸ್ಕರ್ ಪ್ರಶಸ್ತಿ ಕೊಡಲೇಬೇಕು ಎಂದು ಮಾಜಿ ಕ್ರಿಕೆಟಿಗರು ವ್ಯಂಗ್ಯವಾಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ನಿಂದ ದೂರವಿದ್ದಿದ್ದಕ್ಕೆ ಸುರೇಶ್ ರೈನಾ ಕೊಟ್ಟ ಕಾರಣ ನೋಡಿ