Publish Date: Mon, 02 May 2022 (09:57 IST)
Updated Date: Mon, 02 May 2022 (09:58 IST)
ನವದೆಹಲಿ: ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್ ನ ಮಹಿಳಾ ಸಿಂಗಲ್ಸ್ ಪಂದ್ಯದ ವೇಳೆ ತಮ್ಮ ವಿರುದ್ಧ ತೀರ್ಪು ನೀಡಿದ ಅಂಪಾಯರ್ ವಿರುದ್ಧ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಮೈದಾನದಲ್ಲೇ ಸಿಟ್ಟು ಹೊರಹಾಕಿದ್ದಾರೆ.
ಪಿ.ವಿ. ಸಿಂಧು ಸರ್ವ್ ಮಾಡುವಾಗ ತಡ ಮಾಡುತ್ತಿದ್ದಾರೆ ಎಂದು ನೆಪ ಹೇಳಿ ಅಂಪಾಯರ್ ಎದುರಾಳಿ ಯಮಗುಚಿಗೆ ಒಂದು ಪೆನಾಲ್ಟಿ ಅಂಕ ನೀಡಿದ್ದರು. ಇದನ್ನು ಪಿ.ವಿ. ಸಿಂಧು ಪ್ರಶ್ನಿಸಿದ್ದಾರೆ. ಅಲ್ಲದೆ, ಪಂದ್ಯದ ಬಳಿಕವೂ ಆಕ್ರೋಶ ಹೊರಹಾಕಿದ್ದು ಅಂಪಾಯರ್ ತೀರ್ಪಿನಿಂದಾಗಿ ಸೋತೆ ಎಂದು ಆರೋಪಿಸಿದ್ದಾರೆ.
ಈ ಪಂದ್ಯವನ್ನು ಸಿಂಧು 21-13, 19-21, 16-21 ಸೆಟ್ ನ ಅಂತರದಿಂದ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.