ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದವರಿಗೆ ಸರ್ಕಾರದ ವತಿಯಿಂದ ನಿನ್ನೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸನ್ಮಾನ ಮಾಡಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಬ್ಯಾಡ್ಮಿಂಟನ್ ತಾರೆ ಸಿಂಧು, ವೈಟ್ ಲಿಫ್ಟರ್ ಮೀರಾಬಾಯಿ ಚಾನು ಗೈರಾಗಿದ್ದರು.
ನಿನ್ನೆ ಟೋಕಿಯೋದಿಂದ ಮರಳಿದ ಭಾರತ ಪುರುಷರ ಹಾಕಿ ತಂಡ, ಮಹಿಳೆಯರ ಹಾಕಿ ತಂಡ, ಕುಸ್ತಿಪಟುಗಳಾದ ರವಿಕುಮಾರ್, ಭಜರಂಗ್ ಪೂನಿಯಾ, ಜ್ವಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ, ಬಾಕ್ಸರ್ ಲೊವ್ಲಿನಾ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಆದರೆ ಕಂಚಿನ ಪದಕ ಗೆದ್ದಿದ್ದ ಸಿಂಧು, ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಈ ಸಮಾರಂಭಕ್ಕೆ ಗೈರಾಗಿದ್ದರು. ಇವರಿಬ್ಬರೂ ಮೊದಲೇ ಭಾರತಕ್ಕೆ ಆಗಮಿಸಿದ್ದರು. ಇದೀಗ ತಮ್ಮ ತವರಿನಲ್ಲಿದ್ದಾರೆ. ಹೀಗಾಗಿ ಈ ಸಮಾರಂಭದಲ್ಲಿ ಈ ಇಬ್ಬರು ತಾರೆಯರ ಗೈರು ಹಾಜರಿ ಎದ್ದು ಕಾಣುತ್ತಿತ್ತು.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!