Select Your Language

Notifications

webdunia
webdunia
webdunia
webdunia

ಪಯಸ್ ಜತೆ ಟೆನ್ನಿಸ್ ಅಂಗಳದ ಕೆಮಿಸ್ಟ್ರಿ ಚೆನ್ನಾಗಿದೆ: ರೋಹನ್ ಬೋಪಣ್ಣ

chemistry
ಚಂದೀಗಢ: , ಶನಿವಾರ, 16 ಜುಲೈ 2016 (18:25 IST)
ಲಯಂಡರ್ ಪೇಸ್ ರೋಹನ್ ಬೋಪಣ್ಣ ಅವರಿಗೆ ನಿಖರವಾಗಿ ಆಪ್ತ ಮಿತ್ರರೇನೂ ಅಲ್ಲದಿದ್ದರೂ ಅವರ ನಡುವೆ ಟೆನ್ನಿಸ್ ಅಂಗಳದಲ್ಲಿನ  ಕೆಮಿಸ್ಟ್ರಿ ಚೆನ್ನಾಗಿದ್ದು, ಅದರಿಂದ ಡೇವಿಸ್ ಕಪ್ ಪಂದ್ಯದಲ್ಲಿ ಕೊರಿಯನ್ನರಾದ ಹಾಂಗ್ ಚಂಗ್ ಮತ್ತು ಸಿಯೊನ್ ಚಾನ್ ಅವರನ್ನು ಸೋಲಿಸಿದ್ದಾಗಿ ರೋಹನ್ ಬೋಪಣ್ಣ ಹೇಳಿದ್ದಾರೆ.

 
ಡಬಲ್ಸ್ ಪಂದ್ಯದಲ್ಲಿ ಬೋಪಣ್ಣ ಮತ್ತು ಪಯಸ್ ಕೊರಿಯಾದ ಜೋಡಿಗಳಾದ ಹಾಂಗ್ ಚಂಗ್ ಮತ್ತು ಸಿಯಾಂಗ್ ಚಾನ್ ಹಾಂಗ್ ಅವರನ್ನು 6-3, 6-4, 6-4ರಿಂದ ಸೋಲಿಸಿದ್ದರು.
 
 ಹಿರಿಯ ಆಟಗಾರ ಪಯಸ್ ಒಲಿಂಪಿಕ್ಸ್ ಕುರಿತು ಯಾವುದೇ ಪ್ರಶ್ನೆಗೆ ಉತ್ತರಿಸಲಿಲ್ಲ. ನಾವು 3 ಸೆಟ್ ಗೆದ್ದಿದ್ದೇವೆ. ಸ್ಪರ್ಧೆ ಕಠಿಣವಾಗಿದ್ದರೂ, ನಾವು ಆಟದ ಮಟ್ಟವನ್ನು ಏರಿಸಬೇಕಿತ್ತು ಎಂದು 18 ಗ್ರಾಂಡ್ ಸ್ಲಾಮ್ ಪ್ರಶಸ್ತಿ ವಿಜೇತ 43 ವರ್ಷದ ಪಯಸ್ ತಿಳಿಸಿದರು. 
 
ರಾಮಕುಮಾರ್ ರಾಮನಾಥನ್ ಮತ್ತು ಸಾಕೇತ್ ಮೈನೇನಿ ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಭಾರತಕ್ಕೆ 2-0 ಜಯತಂದುಕೊಟ್ಟಿದ್ದಕ್ಕೆ ಪಯಸ್ ಶ್ಲಾಘಿಸಿದರು. ಒಟ್ಟಾರೆಯಲ್ಲಿ ಕೊರಿಯಾವನ್ನು 3-0ಯಿಂದ ಸೋಲಿಸಿದ್ದು ಸುಲಭವಾಗಿರಲಿಲ್ಲ. ಕೊರಿಯಾ ಏಷ್ಯಾದಲ್ಲಿ ಸದೃಢ ಶಕ್ತಿಯಾಗಿದೆ ಎಂದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ತಂಡದಿಂದ ತೆಗೆದಿದ್ದರಿಂದ ಹತಾಶೆ: ಹಾಕಿ ಇಂಡಿಯಾಗೆ ರಿಟು ರಾಣಿ ತರಾಟೆ