ರಿಯೊ ಒಲಿಂಪಿಕ್ಸ್ ನಾಯಕತ್ವದಿಂದ ತೆಗೆದಿದ್ದಲ್ಲದೇ ತಂಡದಿಂದಲೂ ತೆಗೆದುಹಾಕಿರುವ ಬಗ್ಗೆ ತೀವ್ರ ಹತಾಶರಾದ ರಿಟು ರಾಣಿ ಹಾಕಿ ಇಂಡಿಯಾ ಆಯ್ಕೆದಾರರ ಮೇಲೆ ಹರಿಹಾಯ್ದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಭಾರತದ ಮಹಿಳಾ ಹಾಕಿ ಟೀಂನ ಮುಂಚೂಣಿಯಲ್ಲಿದ್ದ ಮಿಡ್‌ಫೀಲ್ಡರ್, ತಮ್ಮ ವಿರುದ್ಧ ಮಾಡಿದ ಕಳಪೆ ನಡವಳಿಕೆ ಮತ್ತು ಕಳಪೆ ಪ್ರದರ್ಶನದ ಆರೋಪಗಳು ಸುಳ್ಳು ಎಂದು ಹೇಳಿದರು.
36 ವರ್ಷದ ವಿರಾಮದ ಬಳಿಕ ಒಲಿಂಪಿಕ್‌ನಲ್ಲಿ ಸ್ಥಾನ ಪಡೆಯಲು ತಂಡಕ್ಕೆ ಮಾರ್ಗದರ್ಶನ ಮಾಡಲು ಕಾರಣರಾಗಿದ್ದ 24 ವರ್ಷದ ರಿಟು ಟಿವಿ ಚಾನೆಲ್‍ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಣ್ಣೀರು ಹರಿಸಿದರು.
ನನ್ನನ್ನು ತಂಡದಿಂದ ತೆಗೆದ ಸುದ್ದಿ ಆಘಾತಕಾರಿಯಾಗಿದೆ. ಫಿಟ್ನೆಸ್ ಅಥವಾ ಕೆಟ್ಟ ನಡವಳಿಕೆಯ ಯಾವುದೇ ವಿವಾದವಿಲ್ಲ. ನನ್ನನ್ನು ತೆಗೆಯುವಾಗ ಸೂಕ್ತ ವಿವರಣೆಯನ್ನು ಕೂಡ ನೀಡಿಲ್ಲ. ನಾನು ತರಬೇತಿ ಶಿಬಿರಗಳನ್ನು ಬಿಟ್ಟು ತೆರಳಿಯೂ ಇಲ್ಲ ಎಂದು ಹೇಳಿದರು.
ಸರ್ದಾರ್ ಸಿಂಗ್ ಅವರು ಮೈದಾನದ ಹೊರಗೆ ಕೆಲವು ವಿವಾದಗಳನ್ನು ಎದುರಿಸುತ್ತಿದ್ದರೂ ಹಾಕಿ ಇಂಡಿಯಾ ಅವರಿಗೆ ಉತ್ತಮ ಬೆಂಬಲ ನೀಡಿದೆ. ಅವರನ್ನು ನಾಯಕತ್ವದಿಂದ ತೆಗೆದರೂ ತಂಡದಲ್ಲಿ ಉಳಿಸಲಾಗಿದೆ. ಆದರೆ ನನಗೇಕೆ ಈ ರೀತಿಯ ಶಿಕ್ಷೆ ಎಂದು ರಿಟು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ