Select Your Language

Notifications

webdunia
webdunia
webdunia
webdunia

ಸಿಂಹದ ಸೆಲ್ಫಿ ತೆಗೆದ ಪ್ರಕರಣದಲ್ಲಿ ಹೇಳಿಕೆ ದಾಖಲಿಸಿದ ರವೀಂದ್ರ ಜಡೇಜಾ

jadeja
ಅಹ್ಮದಾಬಾದ್: , ಶನಿವಾರ, 16 ಜುಲೈ 2016 (16:56 IST)
ಕ್ರಿಕೆಟರ್ ರವೀಂದ್ರ ಜಡೇಜಾ ಜುನಾಗಡ್ ಗಿರ್‌ನ ವನ್ಯಜೀವಿ ಧಾಮದಲ್ಲಿ ಸಿಂಹಗಳ ಸೆಲ್ಫಿ ತೆಗೆದು ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ತಮ್ಮ ಅಧಿಕೃತ ಹೇಳಿಕೆಯನ್ನು ದಾಖಲಿಸಿಕೊಂಡರು.

ಒಂದು ತಿಂಗಳ ಹಿಂದೆ ಈ ವಿಷಯ ನಮ್ಮ ಗಮನಕ್ಕೆ ಬಂದ ಬಳಿಕ ನಾವು ಜಡೇಜಾರನ್ನು ಕರೆದು ಅವರ ಹೇಳಿಕೆ ನಮ್ಮ ಬಳಿ ದಾಖಲಿಸುವಂತೆ ತಿಳಿಸಿದೆವು. ಅವರು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ನಾವು ಅಂತಿಮ ವರದಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದ್ದು, ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜುನಾಗಢ್ ಮುಖ್ಯ ಅರಣ್ಯ ಸಂರಕ್ಷಕ ಎಪಿ ಸಿಂಗ್ ತಿಳಿಸಿದ್ದಾರೆ.
 
ಜಡೇಜಾ ಹೇಳಿಕೆಯ ಒಕ್ಕಣೆಯನ್ನು ಅವರು ವಿವರಿಸಲಿಲ್ಲ. ಜಡೇಜಾ ಮತ್ತು ಪತ್ನಿ ಸಿಂಹಗಳ ಮುಂದೆ ತೆಗೆದುಕೊಂಡಿದ್ದ ಸೆಲ್ಫಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಗುಜರಾತ್ ಅರಣ್ಯ ಇಲಾಖೆ ಕಳೆದ ತಿಂಗಳು ತನಿಖೆಗೆ ಆದೇಶಿಸಿತ್ತು. 
 
ಅರಣ್ಯ ಗಾರ್ಡ್‌ಗಳು ಕೂಡ ಸಫಾರಿ ವಾಹನದ ಪಕ್ಕದಲ್ಲಿ ದಂಪತಿ ಜತೆ ಕೆಳಕ್ಕೆ ಇಳಿದಿದ್ದರು. ನಿಯಮಗಳ ಪ್ರಕಾರ, ಪ್ರವಾಸಿಗಳು ಅರಣ್ಯಧಾಮದ ಒಳಗೆ ವಾಹನನಗಳಿಂದ ಇಳಿಯಲು ಅವಕಾಶವಿಲ್ಲ. ಜೂನ್ 15ರಂದು ತೆಗೆದ ಒಂದು ಚಿತ್ರದಲ್ಲಿ ಜಡೇಜಾ ಮತ್ತು ಪತ್ನಿ ನೆಲದ ಮೇಲೆ ಕುಳಿತಿದ್ದು, ಸಿಂಹವೊಂದು ಅವರ ಹಿಂದೆ ಮರದ ಕೆಳಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಚಿತ್ರ ಸೆರೆಹಿಡಿಯಲಾಗಿತ್ತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪುತ್ರಿ ಜಿವಾ ಜತೆ ಗಡ್ಡದೊಂದಿಗಿರುವ ಧೋನಿ ಚಿತ್ರ ಅಸಲಿಯೊ, ನಕಲಿಯೊ?