Select Your Language

Notifications

webdunia
webdunia
webdunia
webdunia

ಪುತ್ರಿ ಜಿವಾ ಜತೆ ಗಡ್ಡದೊಂದಿಗಿರುವ ಧೋನಿ ಚಿತ್ರ ಅಸಲಿಯೊ, ನಕಲಿಯೊ?

dhon
ನವದೆಹಲಿ: , ಶನಿವಾರ, 16 ಜುಲೈ 2016 (16:06 IST)
ಭಾರತದ ಸೀಮಿತ ಓವರುಗಳ ನಾಯಕ ಮಹೇಂದ್ರ ಸಿಂಗ್ ಧೋನಿ ಪುತ್ರಿ ಜಿವಾ ಜತೆಗಿರುವ  ವಿಶಿಷ್ಟ ಚಿತ್ರವನ್ನು  ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಗೊಂದಲ ಉಂಟುಮಾಡಿದ್ದಾರೆ. ರಾಂಚಿಯ ಕ್ರಿಕೆಟರ್ ಇಷ್ಟು ದೊಡ್ಡ ಗಾತ್ರದ ಗಡ್ಡವನ್ನು ಬಿಟ್ಟಿದ್ದು ಇದುವರೆಗೆ ಯಾರೂ ನೋಡಿರಲಿಲ್ಲ.
 
ಪುತ್ರಿ ಜಿವಾ ಅವರ ತೊಡೆಯ ಮೇಲೆ ಕುಳಿತಿದ್ದು ಸ್ಪಷ್ಟವಾಗಿ ಹಳೆಯ ಚಿತ್ರದಂತೆ ಕಾಣುತ್ತಿದೆ. ಈ ಗಡ್ಡ ನಕಲಿ ಗಡ್ಡ ಎಂದು ಕೆಲವು ಧೋನಿ ಅಭಿಮಾನಿಗಳು ಅಭಿಪ್ರಾಯ ಹೊಂದಿದ್ದಾರೆ. ಆದರೆ ನಕಲಿಯೋ , ಅಸಲಿಯೊ ಎನ್ನುವುದನ್ನು ನೀವೇ ನಿರ್ಧರಿಸಬೇಕಿದೆ.
 
ಧೋನಿ ಪ್ರಸಕ್ತ ತಮ್ಮ ಕುಟುಂಬದ ಜತೆ ಭಾರತದಲ್ಲಿ ಕಾಲಕಳೆಯುತ್ತಿದ್ದು, ಅಕ್ಟೋಬರ್‌ವರೆಗೆ ಯಾವುದೇ ಸೀಮಿತ ಓವರುಗಳ ಕ್ರಿಕೆಟ್ ವೇಳಾಪಟ್ಟಿ ಅವರಿಗಿಲ್ಲ. ಅಕ್ಟೋಬರ್ ಬಳಿಕವೇ ಧೋನಿ ನ್ಯೂಜಿಲೆಂಡ್ ವಿರುದ್ಧ ಸ್ವದೇಶದಲ್ಲಿ ಐದು ಏಕದಿನ ಪಂದ್ಯಗಳನ್ನು ಎದುರಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ವಿಜೇಂದರ್ ಸಿಂಗ್ ವಿರುದ್ಧ ಕೆರಿ ಹೋಪ್ ಹೈ ವೋಲ್ಟೇಜ್ ಬಾಕ್ಸಿಂಗ್