Select Your Language

Notifications

webdunia
webdunia
webdunia
webdunia

ಇಂದು ವಿಜೇಂದರ್ ಸಿಂಗ್ ವಿರುದ್ಧ ಕೆರಿ ಹೋಪ್ ಹೈ ವೋಲ್ಟೇಜ್ ಬಾಕ್ಸಿಂಗ್

ಇಂದು ವಿಜೇಂದರ್ ಸಿಂಗ್  ವಿರುದ್ಧ ಕೆರಿ ಹೋಪ್ ಹೈ ವೋಲ್ಟೇಜ್ ಬಾಕ್ಸಿಂಗ್
ನವದೆಹಲಿ: , ಶನಿವಾರ, 16 ಜುಲೈ 2016 (14:32 IST)
ಭಾರತದ ಬಾಕ್ಸಿಂಗ್‌ನ ಪೋಸ್ಟರ್ ಬಾಯ್ ವಿಜೇಂದರ್ ಸಿಂಗ್  2010ರ ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸ್ವದೇಶಿ ಪ್ರೇಕ್ಷಕರ ಎದುರು ಕೊನೆಯದಾಗಿ ಹೋರಾಟ ಮಾಡಿದ್ದು, ಅದರಲ್ಲಿ ಕಂಚಿನ ಪದಕ ಗೆದ್ದಿದ್ದರು.  6 ವರ್ಷಗಳ ನಂತರ ಹರ್ಯಾಣ ಬಾಕ್ಸರ್ ವೃತ್ತಿಪರ ಬಾಕ್ಸರ್ ಆಗಿ ಪರಿವರ್ತನೆಯಾಗಿದ್ದು, ತಮ್ಮ ವೃತ್ತಿಜೀವನದ ಅತೀ ದೊಡ್ಡ ಹೋರಾಟಕ್ಕೆ ಅಣಿಯಾಗಿದ್ದಾರೆ. ಇಲ್ಲಿನ ತ್ಯಾಗರಾಜ ಸ್ಟೇಡಿಯಂನಲ್ಲಿ ಶನಿವಾರ ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಸೂಪರ್ ಮಿಡಲ್‌ವೈಟ್ ಪ್ರಶಸ್ತಿಗಾಗಿ ಆಸ್ಟ್ರೇಲಿಯಾದ ಕೆರಿ ಹೋಪ್ ಅವರನ್ನು ವಿಜೇಂದರ್ ಎದುರಿಸಲಿದ್ದಾರೆ.
 
ಅತ್ಯಂತ ನಿರೀಕ್ಷಿತ ಹೋರಾಟದ ವಿವರಗಳು ಕೆಳಗಿನಂತಿವೆ
ಎದುರಾಳಿ ಹೆಸರು: ಕೆರಿ ಹೋಪ್(ಆಸ್ಟ್ರೇಲಿಯಾ)
 ಹೋರಾಟದ ಸ್ಥಳ:  ತ್ಯಾಗರಾಜ ಸ್ಟೇಡಿಯಂ, ನವದೆಹಲಿ
ದಿನಾಂಕ: 16 ಜುಲೈ 2016 ವೇಳೆ ರಾತ್ರಿ  7 ಗಂಟೆ
ಡಬ್ಲ್ಯುಡಿಒ ಪ್ರಶಸ್ತಿ: ಏಷ್ಯಾ ಪೆಸಿಫಿಕ್ ಸೂಪರ್ ಮಿಡಲ್‌ವೇಟ್
 
 ಅವರು ಮಾಜಿ ಡಬ್ಲ್ಯುಸಿಸಿ ಐರೋಪ್ಯ ಚಾಂಪಿಯನ್ ಆಗಿದ್ದು 23-7 ಗೆಲುವು-ಸೋಲಿನ ದಾಖಲೆ ಹೊಂದಿದ್ದಾರೆ. ವಿಜೇಂದರ್ ಎದುರಿಸಿದ ಎದುರಾಳಿಗಳ ಪೈಕಿ ಅವರಿಗೆ ಸರಿಸಮವಾಗಿದ್ದವರು ಯಾರೂ ಇರಲಿಲ್ಲ. ಆದರೆ  ಕೆರಿ ಹೋಪ್ ಅತ್ಯಂತ ಕಠಿಣ ಎದುರಾಳಿಯಾಗಿದ್ದಾರೆ. ನಾನು ತುಂಬಾ ಚೆನ್ನಾಗಿ ತರಬೇತು ಹೊಂದಿದ್ದು, ಗೆಲ್ಲುವ ವಿಶ್ವಾಸವಿದೆ ಎಂದು ಕೆರಿ ಹೋಪ್ ಹೇಳಿದ್ದಾರೆ. ಕೆರ್ರಿ ಹೋಪ್ ಮಾಜಿ ವಿಶ್ವ ನಂಬರ್ 3 ಸ್ಥಾನದಲ್ಲಿದ್ದರು. ಆದರೆ ಅಧಿಕ ಒತ್ತಡದ ಪಂದ್ಯದಿಂದ ವಿಜೇಂದರ್ ಹೆದರಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಸಿಐನ ಮಿನಿ-ಐಪಿಎಲ್ ಯೋಜನೆಗೆ ಪೆಟ್ಟು: ನಾಲ್ಕು ಕ್ರಿಕೆಟ್ ಮಂಡಳಿಗಳ ವಿರೋಧ