Select Your Language

Notifications

webdunia
webdunia
webdunia
webdunia

ನಿಜ ಜೀವನದಲ್ಲೂ ಹೀರೋ ಆದ ಒಲಿಂಪಿಯನ್ ಕೃಷ್ಣ ಪೂನಿಯಾ

ನಿಜ ಜೀವನದಲ್ಲೂ ಹೀರೋ ಆದ ಒಲಿಂಪಿಯನ್ ಕೃಷ್ಣ ಪೂನಿಯಾ
Rajasthan , ಮಂಗಳವಾರ, 3 ಜನವರಿ 2017 (14:07 IST)
ರಾಜಸ್ಥಾನ್: ಅಥ್ಲಿಟ್ ಗಳೆಂದರೆ ಮೈದಾನದಲ್ಲಿ ಮಾತ್ರ ಹೀರೋಯಿಸಂ ತೋರಿಸಲು ಲಾಯಕ್ಕು ಎನ್ನುವವರಿಗೆ ಇಲ್ಲಿದೆ ನೋಡಿ ನಿಜ ಜೀವನದಲ್ಲೂ ಹೀರೋ ಆದ ಅಥ್ಲಿಟ್ ಕತೆ.  ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದ, ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಡಿಸ್ಕಸ್ ಥ್ರೋ ಆಟಗಾರ್ತಿ ಕೃಷ್ಣ ಪೂನಿಯಾ ಹೆಣ್ಣು ಮಕ್ಕಳನ್ನು ರಕ್ಷಿಸಿದ ಕತೆ.


ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದ ಘಟನೆಯಿದು. ಪೂನಿಯಾ ತಮ್ಮ ಕಾರಿನಲ್ಲಿ, ಪ್ರಯಾಣಿಸುತ್ತಿದ್ದಾಗ ರೈಲ್ವೇ ಕ್ರಾಸಿಂಗ್ ಬಳಿ ಅಳುತ್ತಾ ನಿಂತಿದ್ದ ಹುಡುಗಿಯರ ಗುಂಪು ಕಾಣಿಸಿತು. ಕಾರು ನಿಲ್ಲಿಸಿ ಅವರನ್ನು ವಿಚಾರಿಸಿದಾಗ ಯುವಕರ ಗುಂಪೊಂದು ಅವರಿಗೆ ಕಿರುಕುಳ ನೀಡುತ್ತಿರುವುದು ತಿಳಿಯಿತು.

ಅವರಲ್ಲೊಬ್ಬ ಈ ಹುಡುಗಿಯರಿಗೆ ಹೊಡೆದಿದ್ದನೆಂದೂ ತಿಳಿದು ಬಂತು. ಕೂಡಲೇ ಪೂನಿಯಾ ಆ ಯುವಕರ ಗುಂಪಿನತ್ತ ಧಾವಿಸಿದಾಗ, ಅವರು ಕಾಲ್ಕಿತ್ತರು. ಆದರೆ ಪೂನಿಯಾ ಸುಮ್ಮನೆ ಬಿಡಲಿಲ್ಲ. ಅವರ ಹಿಂದೆಯೇ ಓಡಿ ಒಬ್ಬಾತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲು ಸಫಲರಾಗಿದ್ದಾರೆ. 

ವಿಷಯ ತಿಳಿದು ಸ್ಥಳಕ್ಕೆ ಹಲವು ಜನ ದೌಡಾಯಿಸಿದ್ದಾರೆ. ಅಲ್ಲದೆ, ಹುಡುಗಿಯರ ಸಹೋದರ ಪೊಲೀಸರಿಗೆ ಘಟನೆ ಬಗ್ಗೆ ದೂರು ನೀಡಿದ್ದಾನೆ. ಅಂತೂ ನೂರಾರು ಜನರ ಮಧ್ಯೆ ಪೂನಿಯಾ ಮಗ್ಧ ಬಾಲಕಿಯರ ರಕ್ಷಿಸಿದ ಹೆಮ್ಮೆಯಿಂದ ಬೀಗಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸುಪ್ರೀಂ ಕೋರ್ಟ್ ಆದೇಶದಂತೆ ಬಿಸಿಸಿಐ ರಿಪೇರಿ ಮಾಡಲು ಒಲ್ಲೆನೆಂದ ಫಾಲಿ ನಾರಿಮನ್