ನವದೆಹಲಿ: ಬಿಸಿಸಿಐ ರಿಪೇರಿ ಮಾಡಲು ಹೊರಟಿರುವ ಸುಪ್ರೀಂ ಕೋರ್ಟ್ ಗೆ ಮೊದಲ ಹೆಜ್ಜೆಯಲ್ಲೇ ಹಿನ್ನಡೆಯಾಗಿದೆ. ಬಿಸಿಸಿಐಗೆ ಉನ್ನತ ಆಡಳಿತಾಧಿಕಾರಿಗಳನ್ನು ನೇಮಿಸಲು ನ್ಯಾಯಾಲಯ ನೇಮಿಸಿದ್ದ ಇಬ್ಬರು ಸದಸ್ಯರ ಸಮಿತಿಯಿಂದ ನ್ಯಾಯವಾದಿ ಫಾಲಿ ನಾರಿಮನ್ ಹಿಂದೆ ಸರಿದಿದ್ದಾರೆ.
87 ವರ್ಷದ ನಾರಿಮನ್ ಜವಾಬ್ದಾರಿ ಹೊತ್ತುಕೊಳ್ಳಲು ಒಪ್ಪದ ಹಿನ್ನಲೆಯಲ್ಲಿ, ಅವರ ಜಾಗಕ್ಕೆ ಹಿರಿಯ ನ್ಯಾಯವಾದಿ ಅನಿಲ್ ದಿವಾನ್ ರನ್ನು ನೇಮಕ ಮಾಡಲಾಗಿದೆ. ತಾನು ಕ್ರಿಕೆಟ್ ಮಂಡಳಿಯಲ್ಲಿ 2009 ರಲ್ಲಿ ಕಾರ್ಯನಿರ್ವಹಿಸಿದ್ದರಿಂದ ಹೆಸರು ಸೂಚಿಸುವ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನಾರಿಮನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆಯವರನ್ನು ಪದಚ್ಯುತಗೊಳಿಸಿತ್ತು. ಅಲ್ಲದೆ, ಹಲವು ಉನ್ನತ ಅಧಿಕಾರಿಗಳು ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೀಗಾಗಿ ಕ್ರಿಕೆಟ್ ಮಂಡಳಿಗೆ ಹೊಸ ಪದಾದಿಕಾರಿಗಳನ್ನು ನೇಮಕಕ್ಕೆ ಹೆಸರು ಸೂಚಿಸಲು ಗೋಪಾಲ್ ಸುಬ್ರಮಣಿಯನ್ ಮತ್ತು ಫಾಲಿ ನಾರಿಮನ್ ರನ್ನು ನೇಮಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ