ನವದೆಹಲಿ: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಪ್ರಬಲವಾಗಿ ಕೇಳಿ ಬರುತ್ತಿರುವ ಹೆಸರು ಮಾಜಿ ನಾಯಕ ಸೌರವ್ ಗಂಗೂಲಿ. ಗಂಗೂಲಿ ಅಧ್ಯಕ್ಷರಾಗಬೇಕೆಂದು ಬಯಸುವವರ ಪಟ್ಟಿಗೆ ಸುನಿಲ್ ಗವಾಸ್ಕರ್, ಸೇರಿಕೊಂಡಿದ್ದಾರೆ.
“ಅಂತಾರಾಷ್ಟ್ರೀಯ ಮಟ್ಟಟದಲ್ಲಿ ಬಿಸಿಸಿಐ ಮಾನ ಹರಾಜಾಗಿದೆ. ಈಗ ಭಾರತ ಕ್ರಿಕೆಟ್ ತಂಡದ ಹೊಸ ಯುಗದಲ್ಲಿದ್ದೇವೆ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲೇಬೇಕು” ಎಂದು ಗವಾಸ್ಕರ್ ಹೇಳಿದ್ದಾರೆ.
“ಟಾಪ್ ಸ್ಥಾನ ಹೊತ್ತುಕೊಳ್ಳಲು ನಮ್ಮ ಬೆಂಚ್ ಸ್ಟ್ರೆಂಗ್ತ್ ಶಕ್ತವಾಗಿದೆ. ನನ್ನ ಮನಸ್ಸಿನಲ್ಲಿರುವ ಒಂದೇ ಹೆಸರು” ಎಂದು ಗವಾಸ್ಕರ್ ಗಂಗೂಲಿ ಹೆಸರು ಹೇಳಿದ್ದಾರೆ. ಇದಕ್ಕೆ ಸೂಕ್ತ ಕಾರಣವನ್ನೂ ಗವಾಸ್ಕರ್ ವಿವರಿಸಿದ್ದಾರೆ.
“ನೆನಪಿಡಿ. 1999-2000 ರಲ್ಲಿ ಟೀಂ ಇಂಡಿಯಾ ಮ್ಯಾಚ್ ಫಿಕ್ಸಿಂಗ್ ನಿಂದ ತತ್ತರಿಸಿದ್ದಾಗ ಇದೇ ಗಂಗೂಲಿ ಭಾರತ ತಂಡವನ್ನು ಮೊದಲಿನ ಹಳಿಗೆ ತಂದರು. ಈಗಲೂ ಗಂಗೂಲಿ ಆ ಕೆಲಸ ಮಾಡಬಹುದು” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ