Publish Date: Thu, 20 Apr 2017 (07:12 IST)
Updated Date: Thu, 20 Apr 2017 (07:14 IST)
ಮುಂಬೈ: ಟೆನಿಸ್ ಅಂಕಣದಲ್ಲಿಲ್ಲದಿದ್ದರೆ, ಹೊರ ಜಗತ್ತಿನಲ್ಲಿ. ಅಂತೂ ಟೆನಿಸ್ ತಾರೆ ಸಾನಿಯಾ ಮಿರ್ಜಾ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಸಾನಿಯಾ ಭೇಟಿಗಾಗಿ ಒಂಭತ್ತು ಮಂದಿ ಬಾಲಿವುಡ್ ನಿರ್ದೇಶಕರು ತೆರಳಿದ ಘಟನೆ ಭಾರೀ ಸದ್ದು ಮಾಡುತ್ತಿದೆ.
ಅಷ್ಟಕ್ಕೂ ಅವರು ಸಾಮಾನ್ಯರಲ್ಲ. ಬಾಲಿವುಡ್ ನ ಅತಿರಥ ಮಹಾರಥರೆನಿಸಿದ ನಿರ್ದೇಶಕರು. ಸಾಜಿದ್ ಖಾನ್, ಫರ್ಹಾ ಖಾನ್, ಝೋಯಾ ಅಖ್ತರ್, ಆಶುತೋಷ್ ಗೌರೀಕರ್, ಕರಣ್ ಜೋಹರ್, ಕಬೀರ್ ಖಾನ್, ಗೋಲ್ಡಿ ಬೆಹ್ಲ್, ಪುನೀತ್ ಮಲ್ಹೋತ್ರಾ ಮುಂತಾದ ಘಟಾನುಘಟಿಗಳೆಲ್ಲಾ ನಿರ್ದೇಶಕಿ ಫರಾ ಖಾನ್ ಮನೆಯಲ್ಲಿ ಸಾನಿಯಾಗಾಗಿ ಸೇರಿದ್ದರು.
ಫರ್ಹಾ ತಮ್ಮ ಆತ್ಮೀಯ ಗೆಳತಿ ಸಾನಿಯಾಗಾಗಿ ಸ್ಪೆಷಲ್ ಡಿನ್ನರ್ ಏರ್ಪಡಿಸಿದ್ದರು. ಇದರಲ್ಲಿ ಈ ಎಲ್ಲಾ ನಿರ್ದೇಶಕರು ಭಾಗವಹಿಸಿ ಮಸ್ತ್ ಮಜಾ ಮಾಡಿದರು. ಯಾರಾದರೂ ಇವರಲ್ಲಿ ಸಿನಿಮಾದಲ್ಲಿ ನಟಿಸಲು ಕಾಲ್ ಶೀಟ್ ಪಡೆಯಲು ಯಶಸ್ವಿಯಾದರಾ? ಗೊತ್ತಿಲ್ಲ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ