Publish Date: Wed, 19 Apr 2017 (18:16 IST)
Updated Date: Wed, 19 Apr 2017 (18:21 IST)
ವಿರಾಟ್ ಕೊಹ್ಲಿ ಎಂತಹ ಆಕ್ರಮಣಕಾರಿ ಆಟಗಾರ ಎಂಬುದು ಇಡೀ ಕ್ರಿಕೆಟ್ ಜಗತ್ತಿಗೆ ಗೊತ್ತು. ಕೊಹ್ಲಿ ಬ್ಯಾಟ್ ಹಿಡಿದು ಫೀಲ್ಡಿಗಿಳಿದರೆ ಬೌಲರ್`ಗಳು ಬೆಚ್ಚಿ ಬೀಳುತ್ತಾರೆ. ಆದರೆ, ನಿನ್ನೆಯ ಪಂದ್ಯದಲ್ಲಿ ಗುಜರಾತ್ ಬ್ಯಾಟ್ ಮನ್ ಒಬ್ಬ ಕೊಹ್ಲಿಗೇ ಬೆವರಿಳಿಸಿದ್ದ.
ನಿನ್ನೆಯ ಪಂದ್ಯದ್ಲಲಿ ಆರ್ಸಿಬಿ ಗೇಲ್ ಮತ್ತು ವಿರಾಟ್ ಕೊಹ್ಲಿ ಅದ್ಬುತ ಬ್ಯಾಟಿಂಗ್ ನೆರವಿನಿಂದ 213 ರನ್`ಗಳ ಬೃಹತ್ ಮೊತ್ತ ಪೇರಿಸಿದ್ದರೂ ಗೆಲುವು ಸಾಧಿಸುವುದು ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾಕೆಂದರೆ, ಬ್ರೆಂಡನ್ ಮೆಕಲಮ್ ಅದ್ಬುತ ಆಟ. 44 ಎಸೆತಗಳಲ್ಲಿ 2 ಬೌಂಡರಿ ಮತ್ತು 7 ಸಿಕ್ಸರ್ ಸಹಿತ ಮೆಕಲಮ್ 72 ರನ್ ಸಿಡಿಸದರು. ಮೆಕಲಮ್ ಔಟಾದ ಬಳಿಕ ಶುರುವಾಗಿದ್ದು ಕಿಶನ್ ಆಟ.
ಕೊಹ್ಲಿ ಬೆವರಿಳಿಸಿದ ಇಶಾನ್ ಕಿಶನ್: ಮೆಕಲಮ್ ಔಟಾದ ಬಳಿಕ ಗೆಲುವು ಸಂಪೂರ್ಣ ಖಚಿತ ಎನ್ನುವ ಪರಿಸ್ಥಿತಿ ಇತ್ತು. ಯುವ ಕ್ರಿಕೆಟಿಗ ಇಶಾನ್ ಕಿಶನ್ ಅದಕ್ಕೆ ಅವಕಾಶ ನೀಡಲಿಲ್ಲ. 16 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 2 ಬೌಡರಿ ಸಹಿತ 39 ರನ್ ಡಿಸಿದ ಕಿಶನ್ ಕೊಹ್ಲಿ ಗಾಬರಿ ಹುಟ್ಟಿಸಿದರು. ಸಿಬೌಂಡರಿಯಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಕಿಸನ್ ಬ್ಯಾಟಿಂಗ್ ಕಂಡು ಬೆವರಿ ಬೆಂಡಾದರು. ಆದರೆ, ಕೊನೆಯ ಓವರಿನಲ್ಲಿ ಇಶಾನ್ ಕಿಶನ್ ಔಟಾದ ಬಳಿಕ ವಿರಾಟ್ ನಿಟ್ಟುಸಿರುಬಿಟ್ಟರು. ಅಸಾಧ್ಯ ಎನ್ನಬಹುದಾದಂತಹ ಗುರಿಯ ಸಮೀಪಕ್ಕೆ ತಂಡವನ್ನ ತಂದು ನಿಲ್ಲಿಸಿದರು ಕಿಶನ್.