Select Your Language

Notifications

webdunia
webdunia
webdunia
webdunia

ನರಸಿಂಗ್ ಯಾದವ್ ಒಲಿಂಪಿಕ್ ಕನಸು ಅಕ್ಷರಶಃ ಅಂತ್ಯ: ವಿಜಯ್ ಗೋಯೆಲ್

narasingh rao
ನವದೆಹಲಿ: , ಮಂಗಳವಾರ, 26 ಜುಲೈ 2016 (12:15 IST)
ಕುಸ್ತಿ ಪಟು ನರಸಿಂಗ್ ಯಾದವ್ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸಾಧ್ಯತೆ ಅಕ್ಷರಶಃ ಮುಗಿದಿದ್ದು, ಕುಸ್ತಿ ಪಟುವಿಗೆ ಅವರನ್ನು ಸಮರ್ಥಿಸಿಕೊಳ್ಳಲು ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಕ್ರೀಡಾ ಸಚಿವ ವಿಜಯ್ ಗೋಯಲ್ ಸುಳಿವು ನೀಡಿದ್ದಾರೆ. ಸುಶೀಲ್ ಕುಮಾರ್ ಅವರನ್ನು ಹಿಂದಿಕ್ಕಿ ರಿಯೊ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದ ನರಸಿಂಗ್ ಭಾನುವಾರ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು.
 
 ನರಸಿಂಗ್ ರಾವ್ ಡೋಪ್ ಪ್ರಕರಣವನ್ನು ವಾಡಾ ಸಂಹಿತೆಯ ಕಠಿಣ ಅನುಷ್ಠಾನದ ಮೂಲಕ ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ನಿರ್ವಹಿಸಲಾಗುತ್ತದೆ.

 ನಾಡಾ ವಾಡಾ ಸಂಹಿತೆಯಡಿ ಸ್ಥಾಪನೆಯಾದ ಸ್ವಯಮಾಧಿಕಾರದ ಸಂಸ್ಥೆಯಾಗಿದ್ದು, ಸ್ವಚ್ಛ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತದೆ ಮತ್ತು ಡೋಪಿಂಗ್ ತಡೆಯುತ್ತದೆ. ನರಸಿಂಗ್ ಪ್ರಕರಣದಲ್ಲಿ ವಾಡಾ ಸಂಹಿತೆ ಅನುಷ್ಠಾನಕ್ಕೆ ತರುವುದನ್ನು ಖಾತರಿ ಮಾಡುತ್ತೇವೆ ಎಂದು  ಜುಲೈ 31ರಿಂದ ಆರಂಭವಾಗುವ ರನ್ ಫಾರ್ ಒಲಿಂಪಿಕ್ಸ್ ಕಾರ್ಯಕ್ರಮ ಪ್ರಕಟಿಸುತ್ತಾ ಗೋಯೆಲ್ ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಶಾಟ್ ಪುಟರ್ ಇಂದರ್‌ಜೀತ್ ಫೇಲ್