ನರಸಿಂಗ್ ಯಾದವ್ ಅವರನ್ನು ಉದ್ದೀಪನ ಮದ್ದು ಸೇವನೆಯ ಆರೋಪದ ಮೇಲೆ ಒಲಿಂಪಿಕ್ಸ್‌ನಿಂದ ನಿಷೇಧಿಸಿದ ಹಗರಣದ ಬೆನ್ನಲ್ಲೇ ರಿಯೊಗೆ ತೆರಳುತ್ತಿದ್ದ ಶಾಟ್ ಪುಟರ್ ಇಂದರ್‌ಜೀತ್ ಸಿಂಗ್ ನಿಷೇಧಿತ ವಸ್ತುವಿನ ಪರೀಕ್ಷೆಯಲ್ಲಿ ಫೇಲ್ ಆಗಿದ್ದು, ಒಲಿಂಪಿಕ್ಸ್‌ನಿಂದ ನಿಷೇಧಿಸುವ ಸಾಧ್ಯತೆಯಿದೆ.
28 ವರ್ಷದ ಇಂದರ್‌ಜೀತ್ ಜೂನ್ 22ರಂದು ನಡೆದ ಪರೀಕ್ಷೆಯಲ್ಲಿ ನಿಷೇಧಿತ ಸ್ಟೆರಾಯ್ಡ್ ಬಳಸಿದ್ದಕ್ಕಾಗಿ ಸಿಕ್ಕಿಬಿದ್ದಿದ್ದಾರೆ.
ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಸಂಸ್ಥೆಯು ಅಥ್ಲೆಟಿಕ್ಸ್ ಒಕ್ಕೂಟಕ್ಕೆ ಪತ್ರ ಬರೆದು ಇಂದ್ರಜಿತ್ ಡೋಪ್ ಟೆಸ್ಟ್‌ನಲ್ಲಿ ಫೇಲ್ ಆಗಿದ್ದಾರೆಂದು ತಿಳಿಸಿರುವುದಾಗಿ ಮೂಲವೊಂದು ಹೇಳಿದೆ.
ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ, ಏಷ್ಯನ್ ಗ್ರಾಂಡ್ ಪ್ರಿಕ್ಸ್ ಮತ್ತು ವಿಶ್ವ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಇಂದರ್‌ಜೀತ್ ರಿಯೊಗೆ ಅರ್ಹತೆ ಪಡೆದ ಮೊದಲ ಭಾರತೀಯ ಅಥ್ಲೀಟ್ ಆಗಿದ್ದರು. ಇಂದರ್‌ಜೀತ್ ಪೆನ್ಸಿಲ್‌ವೇನಿಯಾದಲ್ಲಿ ಅಮೆರಿಕದ ತರಬೇತಿ ಸಂದರ್ಭದಲ್ಲಿ ಪ್ರದರ್ಶನ ವರ್ಧಿಸುವ ನಿಷೇಧಿತ ಔಷಧಿಯನ್ನು ಸೇವಿಸಿರಬಹುದೆಂದು ಭಾವಿಸಲಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.