ನವದೆಹಲಿ: ವೃತ್ತಿ ವೈಷಮ್ಯವೇನೇ ಇರಬಹುದು. ಆದರೆ ಸಾನಿಯಾ ಮಿರ್ಜಾ ಕಾಲೆಳೆಯುವಂತಹ ಕಾಮೆಂಟ್ ಮಾಡಲು ಲಿಯಾಂಡರ್ ಪೇಸ್ ನಿರಾಕರಿಸಿದ್ದಾರೆ. ಆಕೆ ಭಾರತದ ರೋಲ್ ಮಾಡೆಲ್ ಎಂದಿದ್ದಾರೆ.
ಹಿಂದೆ ಸಾನಿಯಾ ಪೇಸ್ ರನ್ನು ಬಹಿರಂಗವಾಗಿಯೇ ಟೀಕೆ ಮಾಡಿದ್ದರು. ಆದರೆ ಪೇಸ್ ಮಾತ್ರ ಸಾನಿಯಾ ಬಗ್ಗೆ ಅವಹಳೇನಕಾರಿಯಾಗಿ ಟೀಕೆ ಮಾಡುವುದಿಲ್ಲ ಎಂದಿದ್ದಾರೆ. ಹಿಂದೊಮ್ಮೆ ನಿಮ್ಮ ಬಗ್ಗೆ ಸಾನಿಯಾ ಟೀಕೆ ಮಾಡಿದ್ದರಲ್ಲ ಎಂದರೆ ಎಲ್ಲರಿಗೂ ಅವರವರ ಅಭಿಪ್ರಾಯ ಹಂಚುವ ಸ್ವಾತಂತ್ರ್ಯವಿದೆ. ಇಲ್ಲಿ ಯಾರು ಸರಿ ಯಾರು ತಪ್ಪು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹಿರಿಯ ಟೆನಿಸಿಗ ಹೇಳಿಕೊಂಡಿದ್ದಾರೆ.
ಹಾಗಿದ್ದರೂ ಸಾನಿಯಾರನ್ನು ಯಾಕೆ ತೆಗಳುವುದಿಲ್ಲ ಎಂದಿದ್ದಕ್ಕೆ, ನಾನು ಆಕೆಯನ್ನು ಗೌರವಿಸುತ್ತೇನೆ. ಆಕೆ ಭಾರತೀಯ ಮಹಿಳಾ ಅಥ್ಲಿಟ್ ಗಳಿಗೆ ರೋಲ್ ಮಾಡೆಲ್ ಎಂದಿದ್ದಾರೆ. ನಾವೆಲ್ಲಾ ಒಂದೇ ದೇಶಕ್ಕೆ ಸೇರಿದವರು ಯಾಕೆ ದ್ವೇಷ ಇಟ್ಟುಕೊಳ್ಳಬೇಕು. ಪರಸ್ಪರ ಗೌರವಿಸೋಣ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ