ಫಾರ್ಮುಲಾ ಒನ್ ಮುಖ್ಯಸ್ಥ ಎಕೋಸ್ಟೋನ್ ಅವರ ಅತ್ತೆಯನ್ನು ಸಾವೊ ಪಾಲೊದಲ್ಲಿ ಅಪಹರಣ ಮಾಡಲಾಗಿದೆ. ಅವರ ಬಿಡುಗಡೆಗೆ 120 ದಶಲಕ್ಷ ಡಾಲರ್ ರಿಯಾಸ್(36.5 ದಶಲಕ್ಷ ಡಾಲರ್) ಒತ್ತೆಹಣ ನೀಡಬೇಕೆಂದು ಅಪಹರಣಕಾರರು ಒತ್ತಾಯಿಸಿದ್ದಾರೆ. ಎಕೋಸ್ಟೋನ್ ಪತ್ನಿ ಫೆಬಿಯಾನಾ ಫ್ಲೋಸಿ ತಾಯಿ ಅಪಾರ್‌ಸಿಡಾ ಸ್ಕುನ್ಕ್ ಅವರನ್ನು ಅಪಹರಿಸಲಾಗಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಫೋರ್ಬ್ಸ್ ಮ್ಯಾಗಜಿನ್ ಅಂದಾಜಿನ ಪ್ರಕಾರ ಎಕೊಸ್ಟೋನ್ ಆಸ್ತಿ 3.1 ಶತಕೋಟಿ ಡಾಲರ್‌ಗಳಾಗಿದ್ದು, ಕ್ರೀಡೆಯಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿ. ಬ್ರೆಜಿಲಿಯನ್ ಗ್ರಾಂಡ್‌ಪ್ರಿಕ್ಸ್‌ನಲ್ಲಿ ಫ್ಲಾಸಿಯನ್ನು ಭೇಟಿ ಮಾಡಿದ್ದ ಅವರು 2012ರಲ್ಲಿ ವಿವಾಹವಾಗಿದ್ದರು.
85 ವರ್ಷ ವಯಸ್ಸಿನ ಎಕೊಸ್ಟೋನ್ ತಮ್ಮ ಮುಂಚಿನ ಪತ್ನಿಕ್ರೊಯೇಷಿಯಾದ ರೂಪದರ್ಶಿ ಸ್ಲಾವಿಕಾ ರಾಡಿಕ್‌ಗೆ ವಿಚ್ಛೇದನ ನೀಡಿ ಬ್ರೆಜಿಲ್ ಕನ್ಯೆಯನ್ನು ವಿವಾಹವಾಗಿದ್ದರು.
ದಂಪತಿ ಈಗ ಇಂಗ್ಲೆಂಡ್‌ನಲ್ಲಿ ವಾಸವಿದ್ದಾರೆ. ಬ್ರೆಜಿಲ್ ಪ್ರಸಕ್ತ ಶತಮಾನದ ಕೆಟ್ಟ ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವ ನಡುವೆ ಅಪಹರಣ ಪ್ರಕರಣಗಳು ಇತ್ತೀಚೆಗೆ ಕಡಿಮೆಯಾಗಿದ್ದವು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.