ಭಾರತ ಕ್ರಿಕೆಟ್ ತಂಡ ಬುಧವಾರ ಬೆಳಿಗ್ಗೆ ಕಿಂಗ್‌ಸ್ಟನ್‌ಗೆ ಇಳಿದ ಕೆಲವು ಗಂಟೆಗಳಲ್ಲೇ ನೆಟ್ ಅಭ್ಯಾಸ ಆರಂಭಿಸಿದೆ. ಇದಾದ ಬಳಿಕ ಉಷ್ಣ ಮತ್ತು ತೇವಾಂಶದ ಸ್ಥಿತಿಗೆ ಹೊಂದಿಕೊಳ್ಳಲು ಕಠಿಣ ವ್ಯಾಯಾಮ ಮಾಡಿದೆ. ಸಾಮಾನ್ಯ ವ್ಯಾಯಾಮದ ಬಳಿಕ ಬ್ಯಾಟಿಂಗ್ ಮತ್ತು ಬೌಲಿಂಗ್ ಸೆಷನ್‍ನೊಂದಿಗೆ ಇಡೀ ತಂಡ ಶ್ರಮ ಪಟ್ಟಿದೆ.
ವೃದ್ಧಿಮಾನ್ ಸಹಾ ವಿಕೆಟ್ ಕೀಪಿಂಗ್ ಕೌಶಲ್ಯಗಳನ್ನು ಕುರಿತು ಅಭ್ಯಾಸ ಮಾಡಿದರು. ಎಡಗೈ ಓಪನರ್ ಶಿಖರ್ ಧವನ್ ನೆಟ್‌ನಲ್ಲಿ ಬಿರುಸಿನ ಅಭ್ಯಾಸ ಮಾಡಿದರು. ಎರಡನೇ ಟೆಸ್ಟ್‌ಗೆ ಮೂರು ದಿನಗಳು ಬಾಕಿವುಳಿದಿರುವ ನಡುವೆ ಮೈದಾನದಲ್ಲಿ ಹುಲ್ಲು ತುಂಬಿಕೊಂಡಿದೆ.
ಭಾರತವು ಆಂಟಿಗಾ ಟೆಸ್ಟನ್ನು ಇನ್ನಿಂಗ್ಸ್ ಮತ್ತು 92 ರನ್‌ಗಳಿಂದ ಗೆದ್ದಿದ್ದು ವಿರಾಟ್ ಕೊಹ್ಲಿ ಮತ್ತು ಅಶ್ವಿನ್ ಕ್ರಮವಾಗಿ ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಕೌಶಲವನ್ನು ಪ್ರದರ್ಶಿಸಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.