ಕುಸ್ತಿಪಟು ನರಸಿಂಗ್ ರಾವ್ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದು ಇನ್ನೂ ಖಚಿತವಾಗಿಲ್ಲ. ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಸಂಸ್ಥೆ(ನಾಡಾ)ಯ ಎರಡು ದಿನಗಳ ವಿಚಾರಣೆ ನವದೆಹಲಿಯಲ್ಲಿ ಗುರುವಾರ ಮುಕ್ತಾಯವಾದ ಬಳಿಕ ಅಂತಿಮ ನಿರ್ಧಾರವನ್ನು ಮುಂದೂಡಿದ್ದು, ಶನಿವಾರ ಅಥವಾ ಸೋಮವಾರ ಪ್ರಕಟಿಸಲಾಗುತ್ತದೆ.
74 ಕೆಜಿ ಫ್ರೀಸ್ಟೈಲ್ ಕುಸ್ತಿಪಟು ಮತ್ತು ಅವರ ವಕೀಲರು ವಿಫಲಗೊಂಡ ಉದ್ದೀಪನ ಮದ್ದು ಸೇವನೆ ಪರೀಕ್ಷೆ ಕುರಿತು ತಮ್ಮ ವಾದವನ್ನು ಮಂಡಿಸಿ ಇದೊಂದು ಪಿತೂರಿ ಎಂದು ಪ್ರತಿಪಾದಿಸಿದ್ದರು. ನಾಡಾದ ಕಾನೂನು ಸಮಿತಿಯು ಪಿತೂರಿ ಸಿದ್ಧಾಂತದ ವಿರುದ್ಧ ತನ್ನ ವಾದಗಳನ್ನು ಶಿಸ್ತು ಸಮಿತಿಯ ಮುಂದೆ ಇರಿಸಿದೆ.
ವಿಚಾರಣೆ ಗುರುವಾರ ಮುಗಿದಿದ್ದು, ತೀರ್ಪ ಶನಿವಾರ ಅಥವಾ ಸೋಮವಾರ ಹೊರಬೀಳಲಿದೆ ಎಂದು ನಾಡಾ ವಕೀಲ ಗೌರಂಗ್ ಕಾಂತ್ ತಿಳಿಸಿದರು.
ನರಸಿಂಗ್ ಪ್ರತಿಪಾದಿಸಿರುವ ಒಳಸಂಚಿನ ಬಗ್ಗೆ ಯಾವುದೇ ಸಾಂದರ್ಭಿಕ ಸಾಕ್ಷ್ಯವನ್ನು ಹಾಜರುಪಡಿಸಿಲ್ಲ ಎಂದು ನಾಡಾ ಹೇಳಿದೆ.
ಅವರ ಪಾನೀಯ ಅಥವಾ ನೀರಿಗೆ ಮದ್ದನ್ನು ಬೆರೆಸಲಾಗಿದೆ ಎಂದು ಅವರು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದರೆ ನಾಡಾ ಮತ್ತು ವಾಡಾಗೆ ತೃಪ್ತಿಯಾಗುವ ರೀತಿಯಲ್ಲಿ ಅವರು ಸಾಕ್ಷ್ಯಾಧಾರ ಹಾಜರುಪಡಿಸಿಲ್ಲ ಎಂದು ಗೌರವ್ ಕಾಂತ್ ತಿಳಿಸಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.