ಟೋಕಿಯೋ: ಒಲಿಂಪಿಕ್ ಕಣದಲ್ಲಿ ಭಾರತದ ಪದಕದ ಆಸೆ ಇನ್ನೂ ಜೀವಂತವಾಗಿದೆ. ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಬಾಕ್ಸಿಂಗ್ ತಾರೆ ಪೂಜಾ ರಾಣಿ ಇಂದು ಪಡೆದ ಗೆಲುವು ಪದಕದ ಆಸೆ ಚಿಗುರಿಸಿದೆ.
ಭಾರತ ಇದುವರೆಗೆ ಕೇವಲ ಒಂದೇ ಒಂದು ಪದಕ ಗೆದ್ದಿದೆ. ಶೂಟಿಂಗ್ ನಲ್ಲಂತೂ ಈ ಬಾರಿ ದಯನೀಯ ವೈಫಲ್ಯ ಅನುಭವಿಸಿದೆ. ಇದೀಗ ಬ್ಯಾಡ್ಮಿಂಟನ್ ಮತ್ತು ಕುಸ್ತಿ, ಬಾಕ್ಸಿಂಗ್ ಪಟುಗಳ ಮೇಲೆ ಭರವಸೆ ಬಾಕಿ ಉಳಿದಿದೆ.
ಈ ಪೈಕಿ ಸಿಂಧು ಬೆಳಿಗ್ಗೆಯೇ ಗೆಲುವು ಸಾಧಿಸಿದ್ದರೆ, ಬಳಿಕ ಮಹಿಳೆಯರ ಮಿಡ್ಲ್ ವೈಟ್ ವಿಭಾಗದಲ್ಲಿ ಭಾರತದ ಪೂಜಾ ರಾಣಿ ನಾಕೌಟ್ ಹಂತ ತಲುಪಿ ಭರವಸೆ ಮೂಡಿಸಿದ್ದಾರೆ. ಇನ್ನು, ಆರ್ಚರಿಯಲ್ಲಿ ಮಹಿಳೆಯರ ಎಲಿಮಿನೇಷನ್ ರೌಂಡ್ ನಲ್ಲಿ ದೀಪಿಕಾ ಕುಮಾರಿ 6-4 ಅಂತರದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಇಂದಿನ ದಿನ ಭಾರತದ ಪಾಲಿಗೆ ಶುಭವಾಗಿದೆ.