ಆಸ್ಟ್ರೇಲಿಯಾ ವಿರುದ್ಧ ಗುರುವಾರ ಫೈನಲ್ ಲೀಗ್ ಪಂದ್ಯದಲ್ಲಿ ಗೆದ್ದು ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್ ಪ್ರವೇಶಿಸುವ ಆಶಾವಾದವನ್ನು ಭಾರತ ಹೊಂದಿದೆ. ನಂತರ ಆಸ್ಟ್ರೇಲಿಯಾ ವಿರುದ್ಧವೇ ಫೈನಲ್ ಪಂದ್ಯವನ್ನು ಭಾರತ ಆಡಬೇಕಿದೆ. ಭಾರತ ಫೈನಲ್ ತಲುಪಲು ಎರಡು ಸಾಧ್ಯತೆಗಳಿವೆ. ಗ್ರೇಟ್ ಬ್ರಿಟನ್ ಕೂಡ ಫೈನಲ್ ಪ್ರವೇಶಿಸಲು ಕಣದಲ್ಲಿದೆ. ಬೆಲ್ಜಿಯಂ, ಜರ್ಮನಿ ಮತ್ತು ದಕ್ಷಿಣ ಕೊರಿಯಾ ಸ್ಪರ್ಧೆಯಿಂದ ನಿರ್ಗಮಿಸಿವೆ.
ಭಾರತ ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ಪೂಲ್‌ನಲ್ಲಿ 10 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಮುಟ್ಟಿ ಫೈನಲ್ ತಲುಪುತ್ತದೆ. ಆಸ್ಟ್ರೇಲಿಯಾಗಿಂತ ಒಂದು ಗೋಲ್ ಮಾತ್ರ ವ್ಯತ್ಯಾಸವನ್ನು ಹೊಂದಿರುತ್ತದೆ. ಭಾರತ 3 ಗೋಲುಗಳ ಅಂತರದಿಂದ ಗೆದ್ದರೆ ಅದು ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುತ್ತದೆ. ಆಗ ಇತರ ಪಂದ್ಯಗಳ ಫಲಿತಾಂಶ ಪರಿಗಣನೆಯಾಗುವುದಿಲ್ಲ.
ಭಾರತ ಆಸ್ಟ್ರೇಲಿಯಾ ಜತೆ ಡ್ರಾ ಮಾಡಿಕೊಂಡರೆ ಬೆಲ್ಜಿಯಂ ತಂಡವು ಬ್ರಿಟನ್ ತಂಡವನ್ನು ಸೋಲಿಸಬೇಕು ಅಥವಾ ಡ್ರಾಮಾಡಿಕೊಳ್ಳಬೇಕು. ಬ್ರಿಟನ್ ಗೋಲ್ ವ್ಯತ್ಯಾಸವು +2 ಆಗಿದ್ದು, ಭಾರತದ +1 ಗಿಂತ ಹೆಚ್ಚಾಗಿದೆ. ಬ್ರಿಟನ್ ಸೋತರೆ ಅಥವಾ ಡ್ರಾ ಮಾಡಿಕೊಂಡರೆ ಮಾತ್ರ ಭಾರತ ಫೈನಲ್ ತಲುಪುತ್ತದೆ. ಭಾರತ ಸೋತರೂ ಕೂಡ ಫೈನಲ್ ತಲುಪಬಹುದು. ಆದರೆ ಬೆಲ್ಜಿಯಂ ತಂಡವು ಗ್ರೇಟ್ ಬ್ರಿಟನ್ ತಂಡದ ಜತೆ ಡ್ರಾ ಮಾಡಿಕೊಳ್ಳಬೇಕು.
ಒಟ್ಟಿನಲ್ಲಿ ಬ್ರಿಟನ್ ಸೋತರೆ ಭಾರತಕ್ಕೆ ಅನುಕೂಲ. ಬ್ರಿಟನ್ ಗೆದ್ದರೆ ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಗೆಲ್ಲದೇ ಬೇರೆ ದಾರಿಯೇ ಇಲ್ಲ. ಆದರೆ ಆಸ್ಟ್ರೇಲಿಯಾ ವಿರುದ್ಧ ಭಾರತದ ಗೆಲುವು ಕಬ್ಬಿಣದ ಕಡಲೆಯಾಗಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತದ ಟ್ರಾಕ್ ದಾಖಲೆ ನಕಾರಾತ್ಮಕವಾಗಿದೆ. ವಿಶ್ವಲೀಗ್ ಸೆಮಿಫೈನಲ್ಸ್‌ನಲ್ಲಿ ಆಸ್ಟ್ರೇಲಿಯಾ ಭಾರತವನ್ನು 6-2ರಿಂದ ಸೋಲಿಸಿತ್ತು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.