ಭಾರತೀಯ ಮೂಲದ ಮಹಿಳಾ ಹಾಕಿ ಆಟಗಾರ್ತಿ ಭಾರತದ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದು, ಚಾಣಕ್ಯಪುರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಕಳೆದ ಮೇನಲ್ಲಿ ರೇಪ್ ಆರೋಪಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಕ್ಲೀನ್ ಚಿಟ್ ನೀಡಿದ್ದರು.
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಳ್ ಈ ಕುರಿತು ಮಾತನಾಡುತ್ತಾ, ಯುವತಿ 2016ರ ಜನವರಿಯಲ್ಲಿ ರೇಪ್ ಮತ್ತು ದೌರ್ಜನ್ಯದ ಆರೋಪವನ್ನು ಸಿಂಗ್ ವಿರುದ್ಧ ಮಾಡಿದ್ದರೂ ಎಫ್‌ಐಆರ್ ದಾಖಲಿಸಲು ವಿಫಲರಾದ ಪಂಜಾಬ್ ಪೊಲೀಸರ ವಿರುದ್ಧವೇ ಎಫ್ಐಆರ್ ದಾಖಲು ಮಾಡಬೇಕೆಂದು ಒತ್ತಾಯಿಸಿದರು.
ಸಿಂಗ್ ತಮ್ಮ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಲ್ಲದೇ ದೆಹಲಿಯ ಪಂಚತಾರಾ ಹೊಟೆಲ್ ಕೊಠಡಿಯಲ್ಲಿ ರೇಪ್ ಮಾಡಿ ಅಲ್ಲಿಂದ ಮೇಲಿನ ಮಹಡಿಯಿಂದ ನೂಕುವ ಪ್ರಯತ್ನವನ್ನು ಮಾಡಿದ್ದಾರೆಂದು ಯುವತಿ ಆರೋಪಿಸಿದ್ದಾರೆ. ಸಿಂಗ್ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ನಾವು ಚಾಣಕ್ಯಪುರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದೇವೆ ಎಂದು ಮಳಿವಾಳ್ ಹೇಳಿದರು.
ಅಂಡರ್ 19 ಇಂಗ್ಲೆಂಡ್ ಹಾಕಿ ಆಟಗಾರ್ತಿಯಾದ ಅಷ್ಪಾಲ್ ಬೋಗಾಲ್ ಈ ರೇಪ್ ಆರೋಪ ಮಾಡಿದ್ದು, ಸರ್ದಾರ್ ತನ್ನ ಜತೆ 2014ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಬಳಿಕ ದೈಹಿಕ ಸಂಬಂಧ ಹೊಂದಿದ್ದ. ಇದರಿಂದ ತಾನು ಗರ್ಭವತಿಯಾಗಿದ್ದು, ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹೇರಿದ, ಬಳಿಕ ನನ್ನನ್ನು ಮದುವೆಯಾಗಲು ನಿರಾಕರಿಸಿದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.