Select Your Language

Notifications

webdunia
webdunia
webdunia
webdunia

11 ಸ್ಥಾನಗಳನ್ನು ಜಿಗಿದ ಭಾರತ: ಫಿಫಾ ಶ್ರೇಯಾಂಕ ಪಟ್ಟಿಯಲ್ಲಿ 152

india
ನವದೆಹಲಿ , ಶನಿವಾರ, 16 ಜುಲೈ 2016 (18:49 IST)
ನವದೆಹಲಿ:  ಲಾವೋಸ್‌ನಲ್ಲಿ ಕಳೆದ ತಿಂಗಳು ಒಂದರ ಹಿಂದೊಂದು ಜಯ ಪಡೆದ ಭಾರತ ಫಿಫಾ ಪ್ರಕಟಿಸಿದ ಫುಟ್ಬಾಲ್ ಶ್ರೇಯಾಂಕಗಳ ಪಟ್ಟಿಯಲ್ಲಿ ದೊಡ್ಡ ಜಿಗಿತವನ್ನು ಮಾಡಿದ್ದು 11 ಸ್ಥಾನಗಳಷ್ಟು ಜಿಗಿದು 152ನೇ ಸ್ಥಾನ ಆಕ್ರಮಿಸಿಕೊಂಡಿದೆ. ಭಾರತ ಲಾವೋಸ್ ತಂಡವನ್ನು 6-1, 1-0ಯಿಂದ ಸ್ವದೇಶ ಮತ್ತು ವಿದೇಶ ಪ್ಲೇ ಆಫ್ ಪಂದ್ಯಗಳಲ್ಲಿ ಗೆದ್ದು, 2019ರ ಏಷ್ಯನ್ ಕಪ್ ಅರ್ಹತಾ ಟೂರ್ನಿಗೆ ಪ್ರವೇಶಿಸಿದೆ.
 
ವಾಸ್ತವವಾಗಿ ಭಾರತ ಏಷ್ಯನ್ ರಾಷ್ಟ್ರಗಳಲ್ಲಿ ನಾಲ್ಕನೇ ಶ್ರೇಷ್ಟ ಸಕಾರಾತ್ಮಕ ಚಲನೆ ಮಾಡಿದ್ದು, ತಜಕಿಸ್ತಾನ 19 ಸ್ಥಾನ ಜಿಗಿದು 145ನೇ ಸ್ಥಾನಕ್ಕೆ ತಲುಪಿದೆ. ಯೆಮನ್ 16 ಸ್ಥಾನಗಳು ಜಿಗಿದಿವೆ ಮತ್ತು ತುರ್ಕ್‌ಮೇನಿಸ್ಥಾನ 14 ಸ್ಥಾನಗಳನ್ನು ಜಿಗಿದು 120ನೇ ಸ್ಥಾನಕ್ಕೆ ತಲುಪಿದೆ.
 
 ಶ್ರೇಯಾಂಕ ಪಟ್ಟಿಯಲ್ಲಿ 39ನೇ ಸ್ಥಾನದಲ್ಲಿರುವ ಇರಾನ್ ಏಷ್ಯಾ ನಂಬರ್ ಒನ್ ಸ್ಥಾನ ಪಡೆದಿದೆ. ಕೊರಿಯಾ ರಿಪಬ್ಲಿಕ್ 48ನೇ ಸ್ಥಾನ, ಉಜ್ಬೇಕಿಸ್ಥಾನ 56, ಜಪಾನ್ 57 ಮತ್ತು ಆಸ್ಟ್ರೇಲಿಯಾ 59ನೇ ಸ್ಥಾನದಲ್ಲಿದೆ. 
 
ಒಟ್ಟಾರೆಯಾಗಿ ಅರ್ಜೆಂಟೈನಾ ಕೋಪಾ ಅಮೆರಿಕಾ ಟೂರ್ನಿಯಲ್ಲಿ ಚಿಲಿಗೆ ಸೋತರೂ ಕೂಡ ಟಾಪ್ ಸ್ಥಾನದಲ್ಲಿದೆ. ಬೆಲ್ಜಿಯಂ, ಕೊಲಂಬಿಯಾ, ಜರ್ಮನಿ ಮತ್ತು ಚಿಲಿ 2ನೇ, 3ನೇ , 4ನೇ ಮತ್ತು ಐದನೇ ಸ್ಥಾನದಲ್ಲಿದ್ದರೆ, ಯೂರೋ 2016ರ ಚಾಂಪಿಯನ್ಸ್ ಪೋರ್ಚುಗಲ್ ಎರಡು ಸ್ಥಾನ ಜಿಗಿತು 6ನೇ ಸ್ಥಾನಕ್ಕೆ ತಲುಪಿದೆ. ಫ್ರಾನ್ಸ್ ಏಳನೇ ಸ್ಥಾನದಲ್ಲಿದ್ದು, ಸ್ಪೇನ್ , ಬ್ರೆಜಿಲ್ ಮತ್ತು ಇಟಲಿ ಟಾಪ್ 10ರ ಸ್ಥಾನದಲ್ಲಿವೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಪಯಸ್ ಜತೆ ಟೆನ್ನಿಸ್ ಅಂಗಳದ ಕೆಮಿಸ್ಟ್ರಿ ಚೆನ್ನಾಗಿದೆ: ರೋಹನ್ ಬೋಪಣ್ಣ