Select Your Language

Notifications

webdunia
webdunia
webdunia
webdunia

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಐತಿಹಾಸಿಕ ಸಾಧನೆ

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಐತಿಹಾಸಿಕ ಸಾಧನೆ
ಟೋಕಿಯೋ , ಸೋಮವಾರ, 6 ಸೆಪ್ಟಂಬರ್ 2021 (09:13 IST)
ಟೋಕಿಯೋ: ಒಲಿಂಪಿಕ್ಸ್ ಇರಲಿ, ಪ್ಯಾರಾಲಿಂಪಿಕ್ಸ್ ಇರಲಿ, ಭಾರತ ಈ ವರ್ಷ ಮಾಡಿದ ಸಾಧನೆಯನ್ನು ಹಿಂದೆಂದೂ ಮಾಡಿರಲಿಲ್ಲ. ಅದರಲ್ಲೂ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಈ ಬಾರಿ ಪದಕಗಳ ಮಳೆಯಾಗಿದೆ.


ಇದುವರೆಗೆ ಭಾರತ ಒಂದು ಪದಕ ಗೆದ್ದರೇ ಹೆಚ್ಚು ಎನ್ನುವ ಪರಿಸ್ಥಿತಿ ಇತ್ತು. ಆದರೆ ಈ ಬಾರಿ ಪ್ರತಿ ನಿತ್ಯ ಒಂದಕ್ಕಿಂತ ಹೆಚ್ಚು ಪದಕ ಗೆಲ್ಲುವ ಮೂಲಕ ಅಮೋಘ ಸಾಧನೆ ಮಾಡಿದೆ.

ಇದುವರೆಗೂ ಪದಕವೇ ಗೆಲ್ಲದ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದೆ. 1968 ರಿಂದ 2016 ರವರೆಗೆ  ಭಾರತ ಗೆದ್ದಿದ್ದು 12 ಪ್ಯಾರಾಲಿಂಪಿಕ್ಸ್ ಪದಕಗಳನ್ನು ಮಾತ್ರ. ಆದರೆ ಈ ಬಾರಿ ಒಂದೇ ಕೂಟದಲ್ಲಿ 19 ಪದಕ ತನ್ನದಾಗಿಸಿಕೊಂಡಿದೆ. ಇದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿದೆಯೇ? ನಮ್ಮ ಒಲಿಂಪಿಕ್ಸ್ ವೀರರ ಈ ಸಾಧನೆಗೆ ಒಂದು ಸೆಲ್ಯೂಟ್ ಹೇಳಲೇಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಗೆ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳ ಸವಾಲು