ಡಿಮಿಟ್ರಿ ಪಾಯೆಟ್ ಅವರ ಮನೋಜ್ಞ ಕೊನೆಯ ನಿಮಿಷದ ಗೋಲಿನಿಂದಾಗಿ ಯೂರೋ 2016ರಲ್ಲಿ ಫ್ರಾನ್ಸ್ 2-1ರಿಂದ ಗ್ರೂಪ್ ಎ ಎದುರಾಳಿ ರೊಮಾನಿಯಾ ವಿರುದ್ಧ ಜಯಗಳಿಸಿದ್ದು, ಆತಿಥೇಯ ರಾಷ್ಟ್ರದ ಅಭಿಯಾನಕ್ಕೆ ಉತ್ತಮ ಆರಂಭ ಒದಗಿಸಿದೆ. ಆಟ ಮುಗಿಯಲು ಕೇವಲ ಒಂದು ನಿಮಿಷ ಬಾಕಿವುಳಿದಿರುವಾಗ ನೆಟ್‌ನ ಮೇಲಿನ ಮೂಲೆಗೆ ಪಾಯೆಟ್ ಚೆಂಡನ್ನು ಹೊಡೆದರು. 1-1ರಿಂದ ಗೋಲು ಸಮವಾಗಿದ್ದಾಗ ಪಂದ್ಯ ಡ್ರಾ ಆಗುವುದೆಂದು ನಿರೀಕ್ಷಿಸಲಾಗಿತ್ತು.
ಆದರೆ ಪಾಯೆಟ್ ಮಿಂಚಿನಂತೆ ಚೆಂಡನ್ನು ಗೋಲಿನ ಬಳಿಗೆ ತಂದು ಗೋಲುಪಟ್ಟಿಯೊಳಗೆ ಚೆಂಡನ್ನು ಹಾಕಿದಾಗ ನೆರೆದಿದ್ದ ಗುಂಪು ಹರ್ಷೋದ್ಗಾರ ಮಾಡಿತು. ಕೆಲವು ತಿಂಗಳ ಹಿಂದೆ ಫ್ರಾನ್ಸ್ ತಂಡದಲ್ಲಿ ಸ್ಥಾನ ಖಚಿತವಿಲ್ಲದಿದ್ದ ವೆಸ್ಟ್ ಹ್ಯಾಮ್ ಯುನೈಟೆಡ್ ಮಿಡ್‌ಫೀಲ್ಡರ್ ಪಿಚ್‌ನಿಂದ ಹೊರಗೆ ಆನಂದಭಾಷ್ಪದೊಂದಿಗೆ ಹೊರಬಂದಾಗ ನೆರೆದಿದ್ದ ಜನರು ಚಪ್ಪಾಳೆ ಮೂಲಕ ಹರ್ಷ ವ್ಯಕ್ತಪಡಿಸಿದರು.
ತಂಡದಲ್ಲಿ ಸ್ಥಾನ ಪಡೆದು ಸ್ಕೋರ್ ಮಾಡಿದ್ದು ಅಧಿಕ ಶ್ರಮ ಮತ್ತು ತ್ಯಾಗದ ಫಲವಾಗಿದೆ. ಸೀಸನ್ ಆರಂಭದಲ್ಲಿ ತಾನು ಆಡುತ್ತೇನೆಂದು ಯೋಚಿಸಿಯೇ ಇರಲಿಲ್ಲ. ಕ್ರೀಡಾಂಗಣಕ್ಕೆ ಬಂದಾಗ ಒಂದು ರೀತಿಯ ಒತ್ತಡವಿದ್ದರೂ ನಾನು ಆಟವನ್ನು ಸ್ವಯಂ ಆನಂದಿಸಿದೆ ಎಂದು ಪಾಯೆಟ್ ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ