Select Your Language

Notifications

webdunia
webdunia
webdunia
webdunia

ರೊನಾಲ್ಡೊ ಈ ವರ್ಷದ ಅತ್ಯಂತ ಶ್ರೀಮಂತ ಅಥ್ಲೀಟ್

ronaldo
ನವದೆಹಲಿ , ಶುಕ್ರವಾರ, 10 ಜೂನ್ 2016 (20:27 IST)
ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊರನ್ನು  ವಿಶ್ವದ ಅತ್ಯಧಿಕ ಸಂಭಾವನೆಯ ಅಥ್ಲೀಟ್ ಆಗಿ ಅಮೆರಿಕ ಬಿಸಿನೆಸ್ ಮ್ಯಾಗಜೀನ್ ಫೋರ್ಬ್ಸ್ ಪಟ್ಟಿಮಾಡಿದೆ.  ರಿಯಲ್ ಮ್ಯಾಡ್ರಿಡ್ ಫಾರ್ವರ್ಡ್ ಆಟಗಾರ ರೊನಾಲ್ಡೊ ವಿಶ್ವದ 100 ಅತ್ಯಧಿಕ ಸಂಭಾವನೆಯ ಅಥ್ಲೀಟ್‌ಗಳ ವಾರ್ಷಿಕ ಪಟ್ಟಿಯಲ್ಲಿ ಟಾಪ್ ಸ್ಥಾನದಲ್ಲಿದ್ದು, ಕಳೆದ 12 ತಿಂಗಳಲ್ಲಿ ಅವರ ಗಳಿಕೆ 88 ದಶಲಕ್ಷ ಡಾಲರ್‌ಗಳಾಗಿವೆ.

ಬಾರ್ಸೆಲೋನಾದ ಲಯೋನೆಲ್ ಮೆಸ್ಸಿಗಿಂತ 6.6 ದಶಲಕ್ಷ ಡಾಲರ್ ಹೆಚ್ಚಿನ ಹಣವನ್ನು ಅವರು ಸಂಪಾದಿಸಿದ್ದು, ಮೆಸ್ಸಿ ಎರಡನೇ ಸ್ಥಾನದಲ್ಲಿದ್ದಾರೆ. 
 
ಟಾಪ್ 100ರಲ್ಲಿ ಐವರು ಬ್ರಿಟನ್ನರಿದ್ದು, ಲೆವಿಸ್ ಹ್ಯಾಮಿಲ್ಟನ್ 11ನೇ ಸ್ಥಾನದಲ್ಲಿ 46 ದಶಲಕ್ಷ ಡಾಲರ್ ಗಳಿಸಿದ್ದಾರೆ.
ರೊನಾಲ್ಡೊ ಗಳಿಕೆಯಲ್ಲಿ ಜಾಹೀರಾತುಗಳು 32 ದಶಲಕ್ಷ ಡಾಲರ್ ಗಳಿಸಿಕೊಟ್ಟಿದ್ದು, ಟೈಗರ್ ವುಡ್ಸ್ 12 ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಮೇವೆದರ್ 16ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಇಬ್ಬರು ಮಹಿಳೆಯರಿದ್ದು, ಸೆರೆನಾ ವಿಲಿಯಮ್ಸ್ 28.9 ದಶಲಕ್ಷ ಡಾಲರ್‌‍ನೊಂದಿಗೆ 40ನೇ ಸ್ಥಾನದಲ್ಲಿದ್ದಾರೆ ಮತ್ತು ಶೆರಪೋವಾ 21. 9 ಮಿಲಿಯನ್ ಗಳಿಕೆಯೊಂದಿಗೆ 88ನೇ ಸ್ಥಾನದಲ್ಲಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಟ್ರೇಲಿಯಾ ಓಪನ್ ಸೆಮಿಫೈನಲ್ ತಲುಪಿದ ಸೈನಾ, ಶ್ರೀಕಾಂತ್