Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ಓಪನ್ ಸೆಮಿಫೈನಲ್ ತಲುಪಿದ ಸೈನಾ, ಶ್ರೀಕಾಂತ್

saina nehwal
ಸಿಡ್ನಿ: , ಶುಕ್ರವಾರ, 10 ಜೂನ್ 2016 (19:47 IST)
ಆಸ್ಟ್ರೇಲಿಯಾ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಥಾಯ್ ಎದುರಾಳಿ ರಚಾನೋಕ್ ಇಂಟಾನೊನ್ ವಿರುದ್ಧ ಜಯಗಳಿಸಿದ ಸೈನಾ ನೆಹ್ವಾಲ್ ಸೆಮಿಫೈನಲ್ ಹಂತಕ್ಕೆ ಮುಟ್ಟಿದ್ದಾರೆ. ಒಲಿಂಪಿಕ್ ಕಂಚಿನ ಪದಕ ವಿಜೇಯ ಸೈನಾ  ಮತ್ತು 2013ರ ವಿಶ್ವ ಚಾಂಪಿಯನ್ ರಚನೋಕ್ ನಡುವೆ ಪಂದ್ಯದಲ್ಲಿ ಏಳನೇ ಸೀಡ್ ಸೈನಾ ಎರಡನೇ ಸೀಡ್ ಥಾಯ್ ಆಟಗಾರ್ತಿಯನ್ನು 28-16, 21-16 ರಿಂದ ಮಣಿಸಿದರು. 
 
ಸೈನಾ ನಾಲ್ಕನೇ ಸೀಡ್ ವಾಂಗ್ ಯಿಹಾನ್ ಮತ್ತು 8ನೇ ಸೀಡ್ ತಾಯ್ ಜು ಯಿಂಗ್ ನಡುವೆ ವಿಜೇತ ಆಟಗಾರ್ತಿ ಜತೆ ಸೆಮಿಫೈನಲ್ಸ್ ಆಡಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವ 13ನೇ ನಂಬರ್ ಶ್ರೀಕಾಂತ್ ಕೊರಿಯಾದ ಕ್ವಾಂಗ್ ಹೀ ಹಿಯೊರನ್ನು 21-18, 21-17 ರಿಂದ 36 ನಿಮಿಷದಲ್ಲಿ ಸೋಲಿಸಿ ಸೆಮಿಫೈನಲ್ ಹಂತವನ್ನು ಮುಟ್ಟಿದರು. 
 
ಗುಂಟೂರಿನ ಯುವಕ ಡೆನ್ಮಾರ್ಕ್ ಹ್ಯಾನ್ಸ್ ಕ್ರಿಸ್ಟಿಯನ್ ವಿಟಿಂಗಸ್ ಅವರನ್ನು ನಾಳೆ ಎದುರಿಸಲಿದ್ದು, ಭಾರತೀಯ ಕಳೆದ ವರ್ಷ ಅವರನ್ನು 2 ಬಾರಿ ಸೋಲಿಸಿದ್ದರು. ಸೈನಾ ಮತ್ತು ರಚನೋಕ್ ನಡುವೆ ಪಂದ್ಯ ತೀವ್ರ ಸೆಣಸಾಟದಿಂದ ಕೂಡಿದ್ದು ಇಬ್ಬರೂ ಕೊನೆಯ ಗಳಿಕೆವರೆಗೆ ಹೋರಾಟ ಮಾಡಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಡಿಆರ್‌ಎಸ್‌ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ಸಾಧ್ಯತೆ