ರಿಯೊ ಒಲಿಂಪಿಕ್ಸ್‌ನಲ್ಲಿ ಅಪ್ರತಿಮ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನ ಪಡೆದುಕೊಂಡಿರುವ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರನ್ನು ಭಾರತದ "ಬ್ರ್ಯಾಂಡ್" ರಾಯಭಾರಿಯನ್ನಾಗಿ ನೇಮಿಸಬೇಕೆಂದು ಭಾರತ ಫುಟ್‌ಬಾಲ್ ತಂಡದ ಮಾಜಿ ನಾಯಕ ಪ್ರಸುನ್ ಬ್ಯಾನರ್ಜಿ ಆಗ್ರಹಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದರು ಕೂಡ ಆಗಿರುವ ಬ್ಯಾನರ್ಜಿ, ಅಭೋಯ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಪಕ್ಷದ ಪರವಾಗಿ ದೀಪಾರನ್ನು ಗುರುವಾರ ಸನ್ಮಾನಿಸಿದರು. ಆ ಬಳಿಕ ಸುದ್ದಿಗಾರರೊಂದಿಗೆ ಮಾತನ್ನಾಡುತ್ತಿದ್ದ ಅವರು, ಜಿಮ್ನಾಸ್ಟಿಕ್ ವಿಭಾಗದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಹೆಮ್ಮೆ ಪಡುವಂತೆ ಮಾಡಿದ ಅವರು ದೇಶದ ಚಿನ್ನದ ಹುಡುಗಿ. ಅವರನ್ನು ದೇಶದ "ಬ್ರ್ಯಾಂಡ್" ರಾಯಭಾರಿಯನ್ನಾಗಿ ನೇಮಿಸಬೇಕು. ಈ ವಿಷಯವನ್ನು ನಾನು ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಹೇಳಿದ್ದಾರೆ.
ಭಾರತದ ತಂಡದ ಭಾಗವಾಗಿ 1970 ರಿಂದ 1980ರ ವರೆಗೆ ಫುಟ್‌ಬಾಲ್ ಆಡಿದ್ದ ಅವರು, ಮೋಹನ್ ಬಗಾನ್ ತಂಡದ ಮಾಜಿ ನಾಯಕರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ