Webdunia - Bharat's app for daily news and videos

Install App

ಡೈಮಂಡ್‌ ಲೀಗ್‌: ಕೂದಲೆಳೆಯ ಅಂತರದಲ್ಲಿ ಚಿನ್ನ ಕಳೆದುಕೊಂಡ ನೀರಜ್‌ ಚೋಪ್ರಾ

Sampriya
ಭಾನುವಾರ, 15 ಸೆಪ್ಟಂಬರ್ 2024 (09:56 IST)
Photo Courtesy X
ಬ್ರಸೆಲ್ಸ್: ಎರಡು ಬಾರಿಯ ಒಲಿಂಪಿಕ್ಸ್‌ ಪದಕ ವಿಜೇತ ಭಾರತದ ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ ಅವರು ಶನಿವಾರ ತಡರಾತ್ರಿ ಇಲ್ಲಿ ನಡೆದ ಡೈಮಂಡ್‌ ಲೀಗ್‌ ಫೈನಲ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಚಿನ್ನವನ್ನು ಕಳೆದುಕೊಂಡರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ 26 ವರ್ಷದ ನೀರಜ್‌ ಚೋಪ್ರಾ ಅವರು ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ  ಎರಡನೇ ಸ್ಥಾನ ಗಳಿಸಿದರು. ಗ್ರೆನೆಡಾದ ಪೀಟರ್ಸ್‌ ಆ್ಯಂಡರ್ಸನ್ ಅವರಿಗೆ ನಿಕಟ ಪೈಪೋಟಿಯೊಡ್ಡಿದ ನೀರಜ್ ಕೇವಲ 1 ಸೆಂಟಿಮೀಟರ್ ಅಂತರದಲ್ಲಿ ಡೈಮಂಡ್ ಟ್ರೋಫಿ ಕಿರೀಟವನ್ನು ತಪ್ಪಿಸಿಕೊಂಡರು.  

 ಆ್ಯಂಡರ್ಸನ್ ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೇ 87.87 ಮೀಟರ್ಸ್ ದೂರದ ಸಾಧನೆ ಮಾಡಿ ಚಿನ್ನವನ್ನು ಖಚಿತಪಡಿಸಿಕೊಂಡರು. ನೀರಜ್ ತಮ್ಮ ಮೂರನೇ ಥ್ರೋನಲ್ಲಿ 87.86 ಮೀ ಸಾಧನೆ ಮಾಡಿದರು. ಜರ್ಮನಿಯ ಜೂಲಿಯನ್ ವೇಬರ್ ಅವರು 85.87 ಮೀ ದೂರ ಥ್ರೋ ಮಾಡಿ ಮೂರನೇ ಸ್ಥಾನ ಪಡೆದರು.

ನೀರಜ್ 2022ರರ ಡೈಮಂಡ್ ಲೀಗ್ ಕೂಟದಲ್ಲಿ ಚಿನ್ನ ಮತ್ತು 2023ರಲ್ಲಿ ಬೆಳ್ಳಿ ಗೆದ್ದಿದ್ದ ನೀರಜ್‌ ಹ್ಯಾಟ್ರಿಕ್‌ ಪದಕದ ಸಾಧನೆ ಮೆರೆದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG test: ಟೀಂ ಇಂಡಿಯಾ, ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ ಇಲ್ಲಿದೆ ನೋಡಿ

Bengaluru Stampede: ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರ್ಟ್‌ ಮೆಟ್ಟಿಲೇರಿದ RCB

R Ashwin video: ಮಹಿಳಾ ಅಂಪಾಯರ್ ಮೇಲೆ ಆರ್ ಅಶ್ವಿನ್ ರೋಷಾವೇಷ

IPL 2026: ಟ್ರೋಫಿ ಗೆದ್ದ ಬೆನ್ನಲ್ಲೇ ಆರ್ ಸಿಬಿ ಐಪಿಎಲ್ ನಿಂದ ಬ್ಯಾನ್

ಕ್ರಿಕೆಟಿಗ ರಿಂಕು ಸಿಂಗ್‌ ನಿಶ್ಚಿತಾರ್ಥ: ಕೈ ಹಿಡಿಯಲಿರುವ ಯುವತಿ ಹಿನ್ನೆಲೆ ಕೇಳಿದ್ರೆ ಶಾಕ್ ಆಗ್ತೀರಾ

ಮುಂದಿನ ಸುದ್ದಿ
Show comments