ನವದೆಹಲಿ: ರಿಯೋ ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಉಡುಗೊರೆಯಾಗಿ ಸಿಕ್ಕಿದ್ದ ದುಬಾರಿ ಬಿಎಂಡಬ್ಲ್ಯು ಕಾರನ್ನು ಮರಳಿಸಿ ಸುದ್ದಿಯಾಗಿದ್ದ ಜಿಮ್ನಾಸ್ಟಿಕ್ ತಾರೆ ದೀಪಾ ಕುರ್ಮಾಕರ್ ಕಾರಿನ ವಿಷಯಕ್ಕೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ ಪಿ ವಿ ಸಿಂಧು, ಸಾಕ್ಷಿ ಮಲಿಕ್ ಮತ್ತು ಕೋಚ್ ಗೋಪಿಚಂದ್ ಗೆ ಹೈದರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರು ಉಡುಗೊರೆಯಾಗಿ ನೀಡಿತ್ತು. ಸಚಿನ್ ತೆಂಡುಲ್ಕರ್ ಕೈಯಿಂದ ಕಾರು ಪಡೆದ ಆಟಗಾರರ ಪೈಕಿ ದೀಪಾ ತಮ್ಮ ತವರು ಅಗರ್ತಲಾ ರಸ್ತೆಯಲ್ಲಿ ದುಬಾರಿ ಕಾರು ನಿರ್ವಹಿಸಲು ಕಷ್ಟವೆಂದು ಸ್ವೀಕರಿಸಿರಲಿಲ್ಲ. ಅದರ ಬದಲಿಗೆ ಅವರಿಗೆ 25 ಲಕ್ಷ ರೂ. ಉಡುಗೊರೆ ನೀಡಲಾಗಿತ್ತು.
ಈ ಬಹುಮಾನ ಮೊತ್ತದಲ್ಲಿ ದೀಪಾ ಇದೀಗ ಹೊಸ ಕಾರು ಖರೀದಿ ಮಾಡಿದ್ದಾರೆ. ಈ ವಿಷಯವನ್ನು ದೀಪಾ ಕೋಚ್ ಬಿಶ್ವೇಶ್ವರ್ ಖಚಿತಪಡಿಸಿದ್ದಾರೆ. ಆಕೆಗೆ ಲಭಿಸಿದ ಬಹುಮಾನ ಮೊತ್ತದಲ್ಲಿ ದೀಪಾ ಕುಟುಂಬ ಇತ್ತೀಚೆಗೆ ಅಗರ್ತಲಾದಲ್ಲಿ ಸರ್ವಿಸ್ ಸೆಂಟರ್ ಇರುವ ಕಾರನ್ನೇ ಖರೀದಿಸಿದ್ದಾರೆ ಎಂದು ಬಿಶ್ವೇಶ್ವರ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ