ಮುಂಬೈ: ನೂರಾರು ಜನರ ಮಧ್ಯೆ ರಾಹುಲ್ ದ್ರಾವಿಡ್ ಅಟೋಗ್ರಾಫ್ ಗೆ ಸಹಿ ಹಾಕುತ್ತಿದ್ದರು. ಅವರ ನಡುವೆ ಅನುಷ್ಕಾ ಶರ್ಮಾ ದ್ರಾವಿಡ್ ಗಾಗಿ ಕಾಯುತ್ತಿದ್ದರು. ಏನಕ್ಕೆ ಗೊತ್ತಾ? ತಮ್ಮ ಒಂದು ಪೆನ್ನಿಗಾಗಿ!
ಆಗ ಅನುಷ್ಕಾ ನಟಿಯಾಗಿರಲಿಲ್ಲ. ಹಾಗಾಗಿ ಯಾರಿಗೂ ಆಕೆಯ ಪರಿಚಯವಿರಲಿಲ್ಲ. ಅನುಷ್ಕಾ ತಮ್ಮನಿಗೆ ದ್ರಾವಿಡ್ ಎಂದರೆ ಇಷ್ಟ. ತಮ್ಮನಿಗಾಗಿ ಅನುಷ್ಕಾ ಚಿನ್ನಸ್ವಾಮಿ ಮೈದಾನಕ್ಕೆ ಜಾಹೀರಾತು ಶೂಟಿಂಗ್ ಗೆ ಬಂದ ದ್ರಾವಿಡ್ ರನ್ನು ಭೇಟಿಯಾಗಲು ಹೋಗಿದ್ದರು. ನೂರಾರು ಜನರ ಮಧ್ಯೆ ನಿಂತು ತಾವೂ ಅಟೋಗ್ರಾಫ್ ಗೆ ಸಹಿ ಹಾಕಿಸಿಕೊಂಡರು. ಅದಕ್ಕಾಗಿ ತಮ್ಮನ ಪೆನ್ನು ಮತ್ತು ಪುಸ್ತಕ ತೆಗೆದುಕೊಂಡು ಹೋಗಿದ್ದರು.
ಅಟೋಗ್ರಾಫ್ ಹಾಕಿಯಾದ ಮೇಲೆ ದ್ರಾವಿಡ್ ಅನುಷ್ಕಾ ಪೆನ್ನು ಹಿಂತಿರುಗಿಸದೇ ಬೇರೆಯವರಿಗೆ ಹಸ್ತಾಕ್ಷರ ಕೊಡುತ್ತಿದ್ದರು. ಹೀಗಾಗಿ ಎಲ್ಲರಿಗೂ ದ್ರಾವಿಡ್ ಸಹಿ ಕೊಡುವವರೆಗೆ ಕಾದ ಅನುಷ್ಕಾ ದ್ರಾವಿಡ್ ಬಳಿ ಹೋಗಿ ತನ್ನ ಪೆನ್ನು ಕೊಡುವಂತೆ ಕೇಳಿಕೊಂಡರಂತೆ.
ಈಗ ನೆನೆಸಿಕೊಂಡರೆ ಅನುಷ್ಕಾಗೆ ನಾಚಿಕೆಯಾಗುತ್ತದಂತೆ. ಆದರೆ ಆಗ ಹಾಗೆಲ್ಲಾ ಯೋಚಿಸಲಿಲ್ಲ. ತನ್ನ ಪೆನ್ನಿಗಾಗಿ ಕಾದು ಕುಳಿತರು. ಯಾಕೆಂದರೆ ಅನುಷ್ಕಾಗೂ ಕ್ರಿಕೆಟ್ ಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ದ್ರಾವಿಡ್ ಎಂತಹ ಶ್ರೇಷ್ಠ ಆಟಗಾರನೆಂಬುದು ಗೊತ್ತಿಲ್ಲದೇ ತಮ್ಮನಿಗಾಗಿ ಪುಸ್ತಕ ಹಿಡಿದು ಬಂದಿದ್ದರಷ್ಟೇ. ಇಂದು ಅದೇ ಅನುಷ್ಕಾ ಟೀಂ ಇಂಡಿಯಾದ ನಾಯಕನ ಪ್ರೇಮಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ