ದಕ್ಷಿಣ ಕೊರಿಯಾ ವಿರುದ್ಧ ಜಯದೊಂದಿಗೆ ಡೇವಿಸ್ ಕಪ್ ಪ್ಲೇಆಫ್ ಹಂತ ಪ್ರವೇಶಿಸಿರುವ ಭಾರತ ತಮ್ಮ ಮೊದಲ ಪ್ಲೇಆಫ್ ಹಂತದ ಪಂದ್ಯವನ್ನು ಬಲಿಷ್ಠ ಸ್ಪೇನ್ ವಿರುದ್ಧ ಆಡಲಿದೆ. ಅಂತಾರಾಷ್ಟ್ರೀಯ ಟೆನಿಸ್ ಒಕ್ಕೂಟ ಡ್ರಾಗಳನ್ನು ನಿನ್ನೆ ಪ್ರಕಟಿಸಿದೆ. ಚಂದೀಗಢದಲ್ಲಿ ಭಾರತ ದಕ್ಷಿಣ ಕೊರಿಯಾವನ್ನು 4-1ರಿಂದ ಗೆದ್ದು ಪ್ಲೇಆಫ್ ಪ್ರವೇಶಿಸಿತ್ತು.
ಡಬಲ್ಸ್ ಐಕಾನ್‌ಗಳಾದ ಲಯಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಡಬಲ್ಸ್ ಜೋಡಿಗಳಾಗಿ ಕೊರಿಯಾ ಜೋಡಿ ವಿರುದ್ಧ ಜಯಗಳಿಸುವ ಮೂಲಕ ರಿಯೊ 2016ರಲ್ಲಿ ಈ ಜೋಡಿಗೆ ಸಕಾರಾತ್ಮಕವಾಗಿ ಪರಿಣಮಿಸಿದೆ. ಸ್ಪೇನೇ ವಿಶ್ವ ಟೆನಿಸ್‌ನಲ್ಲಿ ಬಲಿಷ್ಠವಾಗಿದ್ದು, ರಾಬರ್ಟೊ ಬಾಟಿಸ್ಟಾ ಆಗಟ್, ಫೆಲಿಸಿಯಾನೊ ಲೋಪೆಜ್, ಡಬಲ್ಸ್ ತಜ್ಞ ಆಟಗಾರರಾದ ಮಾರ್ಕ್ ಲೋಪೆಜ್, ಪಾಬ್ಲೊ ಕಾರೆನಾ ಬಸ್ತಾ ಮುಂತಾದವರಿದ್ದಾರೆ.
ರಾಫೆಲ್ ನಡಾಲ್ ಆಟ ನೋಡಲು ಉತ್ಸುಕರಾಗಿದ್ದ ಪ್ರೇಕ್ಷಕರಿಗೆ ನಿರಾಶೆಯಾಗದಿದೆ. ಗಾಯದಿಂದಾಗಿ ರಾಫೆಲ್ ನಡಾಲ್ ಗ್ರಾಂಡ್ ಸ್ಲಾಮ್‌ಗಳಲ್ಲದೇ ಡೇವಿಸ್ ಕಪ್‌ನಲ್ಲಿ ಕೂಡ ಆಡುತ್ತಿಲ್ಲ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.