ಕೊಲ್ಕತಾ: ತೆಲುಗು ಟೈಟಾನ್ಸ್ ತಂಡವು ಪ್ರೊ ಕಬಡ್ಡಿಯ ನಾಲ್ಕನೇ ಆವೃತ್ತಿಯಲ್ಲಿ ದಬಾಂಗ್ ಡೆಲ್ಲಿ ತಂಡವನ್ನು 36-28 ಪಾಯಿಂಟ್‌ಗಳಿಂದ ಸೋಲಿಸಿದ್ದು, ಟೈಟಾನ್ಸ್ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕೋಲ್ಕತಾದ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಪರ ರಾಹುಲ್ ಚೌಧರಿ ಇನ್ನೊಂದು ರೈಡರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಗೆದ್ದರು. ಜಸ್ಮೇರ್ ಸಿಂಗ್ ಗುಲಿಯಾ ಐದು ಪಾಯಿಂಟ್‌ಗಳೊಂದಿಗೆ ಪಂದ್ಯದ ಡಿಫೆಂಡರ್ ಮತ್ತು ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಪಾತ್ರರಾದರು.
ಚೌಧುರಿ ಅವರಿಗೆ ಹಣೆಗೆ ಗಾಯವಾಗಿ ರಕ್ತಸೋರುತ್ತಿದ್ದರೂ ಲೆಕ್ಕಿಸದೇ ಬ್ಯಾಂಡೇಜ್ ಹಾಕಿಕೊಂಡು ಆಡಿ 16 ಪಾಯಿಂಟ್ ಗಳಿಸಿದರು. ಇದರಿಂದ ತೆಲುಗು ಟೈಟಾನ್ಸ್ 11 ಪಂದ್ಯಗಳಿಂದ 6 ರಲ್ಲಿ ಗೆದ್ದರು.
ಸೋಲುಗಳ ಹ್ಯಾಟ್ರಿಕ್‌ನೊಂದಿಗೆ ಪಂದ್ಯ ಆರಂಭಿಸಿದ್ದ ತೆಲುಗು ಟೈಟಾನ್ಸ್ 6 ಪಂದ್ಯಗಳಲ್ಲಿ ಅಜೇಯವಾಗಿ ಉಳಿದು ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.