Select Your Language

Notifications

webdunia
webdunia
webdunia
webdunia

ನರಸಿಂಗ್ ಯಾದವ್ ಪ್ರಕರಣ: ಕೇಸು ದಾಖಲಿಸಿದ ಸಿಬಿಐ

ನರಸಿಂಗ್ ಯಾದವ್ ಪ್ರಕರಣ: ಕೇಸು ದಾಖಲಿಸಿದ ಸಿಬಿಐ
New Delhi , ಬುಧವಾರ, 19 ಅಕ್ಟೋಬರ್ 2016 (10:19 IST)
ನವದೆಹಲಿ: ಉದ್ದೀಪನಾ  ಔಷಧ ಸೇವಿಸಿದ ಆರೋಪದಲ್ಲಿ ರಿಯೋ ಒಲಿಂಪಿಕ್ಸ್ ಪಂದ್ಯದ ಸಂದರ್ಭದಲ್ಲಿ ನಿಷೇಧಕ್ಕೊಳಗಾದ ಭಾರತೀಯ ಕುಸ್ತಿಪಟು ನರಸಿಂಗ್ ಯಾದವ್ ಪ್ರಕರಣದಲ್ಲಿ ಸಿಬಿಐ ಕೇಸು ದಾಖಲಿಸಿದೆ.

ಒಲಿಂಪಿಕ್ಸ್ ಪಂದ್ಯಕ್ಕೆ ಕೆಲವೇ ದಿನಗಳ ಮುಂಚೆ ನರಸಿಂಗ್ ಈ ಆರೋಪಕ್ಕೊಳಗಾಗಿ ಆಡಲು ಸಾಧ್ಯವಾಗಿರಲಿಲ್ಲ. ನಂತರದಲ್ಲಿ ಇದು ಅವರ ವಿರುದ್ಧ ನಡೆದ ವ್ಯವಸ್ಥಿತ ಪಿತೂರಿ ಎಂಬ ಅನುಮಾನಗಳು ದಟ್ಟವಾಗಿತ್ತು.

ಪ್ರಕರಣ ಕುರಿತಂತೆ ಹರ್ಯಾಣ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಆದರೆ ಇದುವರೆಗೆ ಯಾವುದೇ ಫಲಿತಾಂಶ ಬಾರದ ಕಾರಣ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಬಡ್ಡಿ ವಿಶ್ವಕಪ್: ಭಾರತಕ್ಕೆ ಜಯ