Select Your Language

Notifications

webdunia
webdunia
webdunia
webdunia

ಬ್ರಿಟನ್-ಬೆಲ್ಜಿಯಂ 3-3 ಡ್ರಾ, ಭಾರತ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಲಗ್ಗೆ

britain
ನಾಗ್ಪುರ: , ಶುಕ್ರವಾರ, 17 ಜೂನ್ 2016 (11:13 IST)
ಭಾರತಕ್ಕೆ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್ ತಲುಪಲು ಅವಕಾಶ ನೀಡುವ ಮೂಲಕ ಗುರುವಾರ ರಾತ್ರಿ ಗ್ರೇಟ್ ಬ್ರಿಟನ್ ಭಾರತಕ್ಕೆ ಭಾರೀ ಅನುಕೂಲ ಮಾಡಿಕೊಟ್ಟಿದೆ. ಲಂಡನ್‌ನಲ್ಲಿ ನಡೆದ ಲೀಗ್ ಕೊನೆಯ ಪಂದ್ಯದಲ್ಲಿ 1-3ರಿಂದ ಹಿಂದಿದ್ದ ಬ್ರಿಟನ್ ಬೆಲ್ಜಿಯಂ ತಂಡದ ಜತೆ 3-3ರಿಂದ ಡ್ರಾಮಾಡಿಕೊಂಡಿದೆ. ಇದರಿಂದ ತವರು ತಂಡ ಬ್ರಿಟನ್ ಲೀಗ್ ಹಂತದಲ್ಲಿ ಎರಡನೇ ಸ್ಥಾನ ಪಡೆಯಲು ಭಾರತಕ್ಕೆ ಅವಕಾಶ ಕಲ್ಪಿಸುವ ಮೂಲಕ 6 ರಾಷ್ಟ್ರಗಳ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಪ್ರಶಸ್ತಿಗಾಗಿ ಭಾರತ ಹೋರಾಡಲಿದೆ.
 
ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2-4ರಿಂದ ಸೋಲನುಭವಿಸಿದರೂ, ಭಾರತದ ತಂಡ ಏಳು ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿ ಕೊನೆಗೊಂಡಿದೆ. ಎರಡು ಜಯ, ಎರಡು ಸೋಲು ಮತ್ತು ಒಂದು ಡ್ರಾನಿಂದ ಭಾರತ ಏಳು ಪಾಯಿಂಟ್ ಸಂಗ್ರಹಿಸಿದ್ದು, ಲೀಗ್ ಹಂತದ ಸೋಲಿಗೆ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ ಇನ್ನೊಂದು ಅವಕಾಶ ಸಿಕ್ಕಿದೆ.
 
 ಭಾರತ ಆಸ್ಟ್ರೇಲಿಯಕ್ಕೆ 2-4ರಿಂದ ಸೋತ ಬಳಿಕ ಬ್ರಿಟನ್ ಫೈನಲ್‌ಗೆ ಹೋಗಲು ಜಯಗಳಿಸಬೇಕಿತ್ತು. ಬೆಲ್ಜಿಯಂ ಮುನ್ನಡೆ ಗಳಿಸಲು ಗಣನೀಯ ಅಂತರದಿಂದ ತವರು ತಂಡವನ್ನು ಸೋಲಿಸಬೇಕಿತ್ತು. ಆದರೆ ಎರಡು ತಂಡಗಳ ನಡುವೆ ಡ್ರಾ ಆಗಿದ್ದು ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತಕ್ಕೆ ಅವಕಾಶ ನೀಡಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ ಪುರುಷರ ಬಿಲ್ಲುಗಾರಿಕೆ ತಂಡ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆಗೆ ವಿಫಲ