ಇಲ್ಲಿನ ಕೊನ್ಯಾಲ್ಟಿ ಬೀಚ್ ಪಾರ್ಕ್‌ನಲ್ಲಿ ವಿಶ್ವಕಪ್ ಹಂತ 3ರ ನೇಪಥ್ಯದಲ್ಲಿ ನಡೆದ ಫೈನಲ್ ಒಲಿಂಪಿಕ್ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಭಾರತದ ಪುರುಷರ ಬಿಲ್ಲುಗಾರಿಕೆ ತಂಡ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ಭಾರತದ ಅತಾನು ದಾಸ್, ಜಯಂತ್ ತಾಲುಕ್‌ದಾರ್ ಮತ್ತು ಮಂಗಲ್ ಸಿಂಗ್ ಚಾಂಪಿಯಾ ಅವರು ಕೆಳ ಕ್ರಮಾಂಕದ ಮಲೇಶಿಯನ್ ತಂಡಕ್ಕೆ ಶೂಟ್‌ಆಫ್‌ನಲ್ಲಿ 4-5ರಿಂದ(27-28) ಸೋಲುವ ಮೂಲಕ ನಿರ್ಗಮಿಸಿದೆ.
ಅರ್ಹತೆ ಪಡೆಯಲು ಟಾಪ್ ಮೂರರಲ್ಲಿ ಸ್ಥಾನಪಡೆಯಬೇಕಾದ ಭಾರತ, ಟರ್ಕಿಯನ್ನು ಶೂಟ್‌ಆಫ್‌ನಲ್ಲಿ 4-5(28-27)ರಿಂದ ಜಯಗಳಿಸಿತ್ತು. ಆದರೂ ಭಾರತ ವೈಯಕ್ತಿಕ ಪುರುಷರ ವಿಭಾಗದಲ್ಲಿ ಆಡಲು ಅರ್ಹತೆ ಪಡೆಯುವ ಸಾಧ್ಯತೆಯಿದೆ. ಏಕೆಂದರೆ ಚಾಂಪಿಯಾ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಏಕೈಕ ಕೋಟಾ ಸ್ಥಾನವನ್ನು ಪಡೆದಿದ್ದರು.
ಆದರೆ ವೈಯಕ್ತಿಕ ಆಟಗಾರರನ್ನು ಆಯ್ಕೆ ಮಾಡಲು ಭಾರತ ಬಿಲ್ಲುಗಾರಿಕೆ ಸಂಸ್ಥೆ ಪ್ರತ್ಯೇಕ ಪರೀಕ್ಷೆ ನಡೆಸುವುದರಿಂದ ಚಾಂಪಿಯಾ ರಿಯೊಗೆ ತೆರಳುವ ತಂಡದಲ್ಲಿ ಮಿಸ್ ಆಗುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ