Select Your Language

Notifications

webdunia
webdunia
webdunia
webdunia

ಆರ್ಚರಿ ವಿಶ್ವಕಪ್: ಚಿನ್ನ ಗೆದ್ದ ಭಾರತದ ತಂಡ

ಆರ್ಚರಿ ವಿಶ್ವಕಪ್: ಚಿನ್ನ ಗೆದ್ದ ಭಾರತದ ತಂಡ
ಶಾಂಘೈ: , ಭಾನುವಾರ, 21 ಮೇ 2017 (11:12 IST)
ಆರ್ಚರಿ ವಿಶ್ವಕಪ್ ನಲ್ಲಿ ಕೊಲಂಬಿಯಾ ತಂಡವನ್ನು ಮಣಿಸಿರುವ ಭಾರತದ ಕಾಂಪೌಂಡ್‌ ಆರ್ಚರಿ ತಂಡ ಚಿನ್ನದ ಪದಕವನ್ನು ಗೆದ್ದಿದೆ.
 
ಚೀನಾದ ಶಾಂಘೈನಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್ ಸ್ಟೇಜ್ -1ರ ಫೈನಲ್ ನಲ್ಲಿ ಕೊಲಂಬಿಯಾ ತಂಡದ ವಿರುದ್ಧ ಭಾರತ ಪುರುಷರ ತಂಡ 226-221 ಅಂಕಗಳ ಅಂತರದಲ್ಲಿ ರೋಚಕ ಜಯ ದಾಖಲಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ.
 
ಭಾರತದ ತಂಡವನ್ನು ಅಭಿಷೇಕ್‌ ವರ್ಮಾ, ಚಿನ್ನರಾಜು  ಶ್ರೀಧರ್‌, ಅಮನ್‌ಜಿತ್ ಸಿಂಗ್‌ ಪ್ರತಿನಿಧಿಸಿದ್ದರು. ಕೊಲಂಬಿಯಾ ತಂಡದಲ್ಲಿ ಕಾಮಿಲೊ ಆಂಡ್ರೆಸ್ ಕರ್ಡೋನಾ, ಜೋಸ್ ಕಾರ್ಲೊಸ್  ಒಸ್ಪಿನಾ ಮತ್ತು ಡ್ಯಾನಿಯಲ್ ಮುನೋಜ್ ಇದ್ದರು.
 
ಇನ್ನು ಮಹಿಳೆಯರ ವಿಭಾಗದ ಪಂದ್ಯದಲ್ಲಿ ಕೊರಿಯಾ, ಡೆನ್ಮಾರ್ಕ್ ಮತ್ತು ರಷ್ಯಾ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ವಿಶೇಷ ಅತಿಥಿಗಳಿಗೆ ಸಿನಿಮಾ ತೋರಿಸಿದ ಸಚಿನ್ ತೆಂಡುಲ್ಕರ್