Publish Date: Sun, 21 May 2017 (04:42 IST)
Updated Date: Sun, 21 May 2017 (04:44 IST)
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಇದೀಗ ಮೊದಲ ಬಾರಿಗೆ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವಾರ ಬಿಡುಗಡೆಯಾಗಲಿರುವ ಅವರ ಜೀವನಾಧಾರಿತ ಚಿತ್ರ ಸಚಿನ್: ಎ ಬಿಲಿಯನ್ ಡ್ರೀಮ್ ನ್ನು ವಿಶೇಷ ಅತಿಥಿಗಳಿಗೆ ಪ್ರದರ್ಶನ ಮಾಡಿದ್ದಾರೆ.
ಮೊದಲ ಬಾರಿಗೆ ತಮ್ಮ ಚಿತ್ರವನ್ನು ಸಚಿನ್ ತೋರಿಸಿರುವುದು ದೇಶ ಕಾಯುವ ಸೈನಿಕರಿಗೆ. ಇದನ್ನು ಟ್ವಿಟರ್ ನಲ್ಲಿ ಸಚಿನ್ ಖುಷಿಯಿಂದಲೇ ಹಂಚಿಕೊಂಡಿದ್ದಾರೆ. ಸಚಿನ್ ಭಾರತೀಯ ಸೇನೆಯ ಗೌರವಾನ್ವಿತ ಸದಸ್ಯರು ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ನಾನು ಆಡಲಿಳಿಯುವಾಗ ನನಗಾಗಿ ಪ್ರತೀ ಬಾರಿ ನನ್ನ ಅಭಿಮಾನಿಗಳು, ಕುಟುಂಬದವರು ಬೆಂಬಲವಾಗಿ ನಿಂತಿದ್ದರು. ಇದೀಗ ನಮ್ಮನ್ನು ಕಾಯುವ ಸೈನಿಕರಿಗೆ ಈ ಮೂಲಕ ನನ್ನ ಧನ್ಯವಾದ ಅರ್ಪಿಸುತ್ತೇನೆ ಎಂದು ಸಚಿನ್ ಭಾವುಕರಾಗಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ