ಭಾರತದ ಅಜಯ್ ಜಯರಾಮ್ ಇಂಡೋನೇಷ್ಯಾ ಗ್ರ್ಯಾಂಡ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಸ್ವದೇಶದವರೇ ಆದ ಪಿ.ಕಶ್ಯಪ್ ಅವರನ್ನು ಸೋಲಿಸಿ ಮೂರನೆಯ ಸುತ್ತಿಗೆ ತಲುಪಿದ್ದ ಅವರು ಬಳಿಕ ನಡೆದ ಪಂದ್ಯದಲ್ಲಿ ಇಂಡೋನೇಷ್ಯಾದ ಅರೆಜಾ ಮೇಘಾನಂದ್ ವಿರುದ್ಧ 18–21, 21–12, 21–19ರಲ್ಲಿ ಗೆಲುವು ದಾಖಲಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಟೂರ್ನಿಯಲ್ಲಿ ಮೂರನೆಯ ಶ್ರೇಯಾಂಕವನ್ನು ಹೊಂದಿರುವ ಜಯರಾಮ್, ಕಶ್ಯಪ್ ಅವರನ್ನು ಎರಡು ನೇರ್ ಸೆಟ್‌ಗಳಲ್ಲಿ (21-7, 21- 12), ಕೇವಲ 27 ನಿಮಿಷಗಳಲ್ಲಿ ನಿರಾಯಾಸವಾಗಿ ಸೋಲಿಸಿ ಅಚ್ಚರಿಯ ಫಲಿತಾಂಶವನ್ನು ನೀಡಿದ್ದರು
ಕಶ್ಯಪ್, ಎಚ್. ಎಸ್. ಪ್ರಣಯ್ ಮತ್ತು ಬಿ.ಸಾಯಿ ಪ್ರಣೀತ್ ಅವರು ಈಗಾಗಲೇ ಟೂರ್ನಿಯಿಂದ ಹೊರಬಿದಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ಜರ್ಮನ್ ಓಪನ್ ಸಂದರ್ಭದಲ್ಲಿ ಗಾಯದಿಂದಾಗಿ ಹೊರ ನಡೆದಿದ್ದ ಕಶ್ಯಪ್ ರಿಯೋ ಒಲಂಪಿಕ್ಸ್‌ನಿಂದ ಸಹ ವಂಚಿತರಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ