ನವದೆಹಲಿ: ಭಾರತದ ಖ್ಯಾತ ಜ್ಯಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಕೈ ಹಿಡಿದ ಹಿಮಾನಿ ಮೋರ್ ನಿಜಕ್ಕೂ ಯಾರು, ಆಕೆಯ ಹಿನ್ನಲೆ ಏನು ಇಲ್ಲಿದೆ ನೋಡಿ ವಿವರ.
ಭಾರತದ ಮೋಸ್ಟ್ ಹ್ಯಾಂಡ್ಸಮ್ ಕ್ರೀಡಾಳು ನೀರಜ್ ಚೋಪ್ರಾ ಸದ್ದಿಲ್ಲದೇ ಮದುವೆಯಾಗಿದ್ದಾರೆ. ನಿನ್ನೆ ದಿಡೀರ್ ಆಗಿ ಅವರು ಸೋಷಿಯಲ್ ಮೀಡಿಯಾದಲ್ಲಿ ಮದುವೆ ಫೋಟೋ ಪ್ರಕಟಿಸಿದಾಗಲೇ ಈ ವಿಚಾರ ಬಹಿರಂಗವಾಗಿತ್ತು.
ನೀರಜ್ ಮದುವೆಯಾಗಿರುವುದು ಹಿಮಾನಿ ಮೋರ್ ಎನ್ನುವ ಯುವತಿಯನ್ನು. ಈಕೆ ಕೂಡಾ ಸಾಮಾನ್ಯಳಲ್ಲ. ನೀರಜ್ ಕುಟುಂಬಸ್ಥರು ನೀಡಿರುವ ಹೇಳಿಕೆ ಪ್ರಕಾರ ಸದ್ಯಕ್ಕೆ ಈಗ ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.
ಆದರೆ ಈಕೆಗೂ ಕ್ರೀಡಾ ಹಿನ್ನಲೆಯಿದೆ ಎಂದು ತಿಳಿದುಬಂದಿದೆ. ಹಿಮಾನಿ ಮೂಲತಃ ಟೆನಿಸ್ ಆಟಗಾರ್ತಿ. ಹರ್ಯಾಣ ಮೂಲದವರಾದ ಹಿಮಾನಿ ಮತ್ತು ನೀರಜ್ ಮದುವೆಯನ್ನು ಹಿರಿಯರೇ ನಿಶ್ಚಯಿಸಿ ಮಾಡಿದ್ದಾರೆ ಎನ್ನಲಾಗಿದೆ. 25 ವರ್ಷದ ಹಿಮಾನಿ ದೆಹಲಿ ವಿವಿಯಿಂದ ರಾಜಕೀಯ ಶಾಸ್ತ್ರ ಮತ್ತು ದೈಹಿಕ ಶಿಕ್ಷಣ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಸದ್ಯಕ್ಕೆ ಈಗ ಆಕೆ ಅಮೆರಿಕಾದಲ್ಲಿ ಕ್ರೀಡಾ ವಿಜ್ಞಾನ ವಿಭಾಗದಲ್ಲಿ ಮಾಸ್ಟರ್ ಡಿಗ್ರಿ ಓದುತ್ತಿದ್ದಾರೆ. ಅಲ್ಲದೆ ಫ್ರಾಂಕ್ಲಿನ್ ಪಿಯರ್ಸ್ ಯುನಿವರ್ಸಿಟಿಯಲ್ಲಿ ಟೆನಿಸ್ ಸಹಾಯಕ ಕೋಚ್ ಆಗಿಯೂ ಕೆಲಸ ಮಾಡಿದ್ದಾರೆ. ಇಂತಹ ಪ್ರತಿಭಾವಂತ ಯುವತಿಯನ್ನೇ ನೀರಜ್ ಮದುವೆಯಾಗಿದ್ದಾರೆ.