ಹೋಟೆಲ್ ರೂಂನಲ್ಲಿ ಹಾಸಿಗೆಯಲ್ಲಿ ಬ್ರಿಜ್ ಭೂಷಣ್ ಸಿಂಗ್ ಏನು ಮಾಡಿದ್ದರು ಎಂದು ಬಿಚ್ಚಿಟ್ಟ ಸಾಕ್ಷಿ ಮಲಿಕ್

Krishnaveni K
ಮಂಗಳವಾರ, 22 ಅಕ್ಟೋಬರ್ 2024 (15:08 IST)
Photo Credit: X
ನವದೆಹಲಿ: ಕುಸ್ತಿ ಫೆಡರೇಷನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮತ್ತೊಮ್ಮೆ ಕುಸ್ತಿಪಟು ಸಾಕ್ಷಿ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ. ಈ ಹಿಂದೆ ಹೋಟೆಲ್ ಕೊಠಡಿಯೊಂದರಲ್ಲಿ ಬ್ರಿಜ್ ತನ್ನೊಂದಿಗೆ ನಡೆದುಕೊಂಡಿರುವ ಘಟನೆಯನ್ನು  ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

2012 ರಲ್ಲಿ ಅಲ್ಮಾಟಿಯಲ್ಲಿ ನಡೆದ ಏಷ್ಯನ್ ಜ್ಯೂನಿಯರ್ ಚಾಂಪಿಯನ್ ಶಿಪ್ ವೇಳೆ ಆಗ ಕುಸ್ತಿ ಫೆಡರೇಷನ್ ಮುಖ್ಯಸ್ಥರಾಗಿದ್ದ ಬ್ರಿಜ್ ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದರು ಎಂದಿದ್ದಾರೆ. ಹೋಟೆಲ್ ಕೊಠಡಿಯಲ್ಲಿ ಘಟನೆ ನಡೆದಿತ್ತು ಎಂದು ಸಾಕ್ಷಿ ಮಲಿಕ್ ವಿವರಿಸಿದ್ದಾರೆ.

ಪೋಷಕರೊಂದಿಗೆ ಮಾತನಾಡಲು ಬ್ರಿಜ್ ನನ್ನನ್ನು ಹೋಟೆಲ್ ಕೊಠಡಿಯೊಳಗೆ ಕಳುಹಿಸಿದ್ದರು. ನಾನು ಪೋಷಕರೊಂದಿಗೆ ಮಾತನಾಡಿ ಕರೆ ಕಟ್ ಮಾಡಿದ ಬಳಿಕ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ನಾನು ಅವರ ಹಾಸಿಗೆ ಮೇಲೆ ಕೂತಿದ್ದೆ. ನನ್ನನ್ನು ಅವರು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಅವರನ್ನು ತಳ್ಳಿ ನಾನು ಅಳಲು ಆರಂಭಿಸಿದೆ. ಯಾವಾಗ ನನ್ನಿಂದ ಅವರಿಗೆ ಬೇಕಾಗಿದ್ದು ಸಿಗಲ್ಲ ಎನಿಸಿತೋ ಆ ಬಳಿಕ ಅವರು ದೂರ ಸರಿದರು. ಬಳಿಕ ನಾನು ಅಲ್ಲಿಂದ ಹೊರಬಂದು ನನ್ನ ಕೊಠಡಿ ಸೇರಿಕೊಂಡೆ ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.

ಇನ್ನು, ತಮ್ಮ ಜೀವನದಲ್ಲಿ ಇದೇ ರೀತಿ ಚಿಕ್ಕವಳಿದ್ದಾಗ ಟ್ಯೂಷನ್ ಶಿಕ್ಷಕರಿಂದಲೂ ಇದೇ ರೀತಿ ಲೈಂಗಿಕ ಕಿರುಕುಳವಾಗಿತ್ತು ಎಂದು ಆರೋಪಿಸಿದ್ದಾರೆ. ಆದರೆ ಇಂತಹ ಅನುಭವಗಳಾಗಿದ್ದರೂ ನನ್ನ ಪೋಷಕರು ನನಗೆ ಬೆಂಬಲವಾಗಿ ನಿಂತರು ಎಂದು ಸ್ಮರಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಜತೆಗಿನ ಮದುವೆ ಮುಂದೂಡಿಕೆ ಬಳಿಕ ಮೊದಲ ಬಾರಿ ಪಲಾಶ್ ಮುಚ್ಚಲ್ ಕಾಣಿಸಿಕೊಂಡಿದ್ದು ಹೀಗೆ

Video: ಕರೆದರೂ ಕೇಳದೇ ಕೇಕ್ ಕಟಿಂಗ್ ಸೆಲೆಬ್ರೇಷನ್ ನಿಂದ ದೂರ ಹೋದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ಪಾಲಿಗೆ ಕೆಎಲ್ ರಾಹುಲ್ ಲಕ್ಕಿ ಚಾರ್ಮ್: ಯಾಕೆ ಇಲ್ಲಿದೆ ನೋಡಿ ವಿವರ

Video: ಜೋರಾಗ್ ಓಡ್ ಮಗಾ...ಮೈದಾನದಲ್ಲಿ ಪ್ರಸಿದ್ಧಗೆ ಕನ್ನಡದಲ್ಲೇ ಆರ್ಡರ್ ಮಾಡಿದ ಕೆಎಲ್ ರಾಹುಲ್

ಚೆನ್ನಾಗಿ ಆಡಿದ್ರೂ ಖುಷಿಯಿಲ್ವಾ: ಪಂದ್ಯದ ಬಳಿಕ ರೋಹಿತ್ ಶರ್ಮಾ ಜೊತೆ ಗಂಭೀರ್ ಕಿತ್ತಾಟ Viral video

ಮುಂದಿನ ಸುದ್ದಿ