ಟೆನಿಸ್ ಜಗತ್ತಿನ ದೊರೆ ರಾಫೆಲ್ ನಡಾಲ್ ವಿದಾಯ: ಕಣ್ಣೀರು, ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಟೆನಿಸ್ ಜಗತ್ತು

Krishnaveni K
ಬುಧವಾರ, 20 ನವೆಂಬರ್ 2024 (11:27 IST)
Photo Credit: X
ನವದೆಹಲಿ: ರೋಜರ್ ಫೆಡರರ್ ಉತ್ತುಂಗದಲ್ಲಿದ್ದಾಗ ಅವರಿಗೆ ಠಕ್ಕರ್ ಕೊಡಲು ಬಂದ ಸ್ಪೇನ್ ನ ರಾಫೆಲ್ ನಡಾಲ್ ಎಂಬ ಟೆನಿಸ್ ದೊರೆ. ಇದೀಗ ತಮ್ಮ 20 ವರ್ಷಗಳ ಟೆನಿಸ್ ಬದುಕಿಗೆ ಕಣ್ಣೀರಿನ  ವಿದಾಯ ಘೋಷಿಸಿದ್ದಾರೆ.

ರಾಫೆಲ್ ನಡಾಲ್ ಈ ಹಿಂದೆಯೇ ಡೇವಿಸ್ ಕಪ್ ನನ್ನ  ವೃತ್ತಿ ಜೀವನದ ಕೊನೆಯ ಟೂರ್ನಿ ಎಂದಿದ್ದರು. ಅದರಂತೆ ಇದೀಗ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ನಲ್ಲಿ ಸ್ಪೇನ್ 1-2 ಅಂತರದಿಂದ ಸೋಲು ಅನುಭವಿಸುತ್ತಿದ್ದಂತೇ ರಾಫೆಲ್ ನಡಾಲ್ ನಿವೃತ್ತಿ ಹೇಳಿದ್ದಾರೆ. ಟೆನಿಸ್ ಜಗತ್ತಿನ ಮತ್ತೊಬ್ಬ ದಿಗ್ಗಜನ ವಿದಾಯಕ್ಕೆ ಟೆನಿಸ್ ಅಭಿಮಾನಿಗಳು ಕಣ್ಣೀರು ಮಿಡಿದಿದ್ದಾರೆ.

ಕೊನೆಯ ಪಂದ್ಯದ ವೇಳೆ ನಡಾಲ್ ಕೂಡಾ ಕಣ್ಣೀರು ಹಾಕಿದ್ದಾರೆ. ಆವೆ ಮಣ್ಣಿನ ಅಂಕಣದ ಕಿಂಗ್ ಎಂದೇ ಕರೆಯಿಸಿಕೊಂಡಿದ್ದ ನಡಾಲ್ ಕ್ಲೇ ಕೋರ್ಟ್ ನಲ್ಲಿ ಒಟ್ಟು 63 ಸಿಂಗಲ್ಸ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಒಟ್ಟು 1080 ಸಿಂಗಲ್ಸ್ ಜಯ, 92 ಸಿಂಗಲ್ಸ್ ಪ್ರಶಸ್ತಿಗಳು, 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳು, 2 ಒಲಿಂಪಿಕ್ಸ್ ಚಿನ್ನದ ಪದಕ ಅವರ ಸಾಧನೆಗೆ ಸಾಕ್ಷಿಯಾಗಿದೆ.

ಕ್ಲೇ ಕೋರ್ಟ್ ನಲ್ಲೇ 14 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದ್ದರು. ನೊವಾಕ್ ಜೊಕೊವಿಕ್ ಬಳಿಕ ಅತ್ಯಂತ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಟೆನಿಸ್ ತಾರೆ ಎಂಬ ಹೆಗ್ಗಳಿಕೆಯೂ ಅವರದ್ದಾಗಿತ್ತು. 4 ಬಾರಿ ಯುಎಸ್ ಓಪನ್, ತಲಾ 2 ಬಾರಿ ವಿಂಬಲ್ಡನ್ ಮತ್ತು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಪಡೆದಿದ್ದರು. ವೃತ್ತಿ ಬದುಕಿನ ಕೊನೆಯ ಪಂದ್ಯವನ್ನು ಸೋತು, ನೆರೆದಿದ್ದವರನ್ನೂ ಭಾವುಕರಾಗಿಸಿ ವಿದಾಯ ಘೋಷಿಸಿದ್ದಾರೆ.
 

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಮೃತಿ ಮಂಧಾನ ತಂದೆ ಬೆನ್ನಲ್ಲೇ ಆಸ್ಪತ್ರೆಗೆ ದಾಖಲಾದ ಪಲಾಶ್ ಮುಚ್ಚಲ್‌, ಕಾರಣ ಏನ್ ಗೊತ್ತಾ

IND vs SA Test: ಭಾರತದ ಗೆಲುವಿಗೆ 549 ರನ್​ಗಳ ಕಠಿಣ ಗುರಿಯೊಡ್ಡಿದ ಹರಿಣ ಪಡೆ

ಮತ್ತೊಂದು ವಿಶ್ವದಾಖಲೆಯ ಹೊಸ್ತಿಲಲ್ಲಿ ರೋಕೊ ಜೋಡಿ: ಸಚಿನ್‌–ದ್ರಾವಿಡ್‌ ದಾಖಲೆಗೆ ಕುತ್ತು

ಸ್ಮೃತಿ ಮಂಧಾನಗೆ ಚೀಟ್ ಮಾಡಿ ಬೇರೆ ಮಹಿಳೆ ಜೊತೆ ಚ್ಯಾಟ್ ಮಾಡ್ತಿದ್ರಾ ಪಾಲಾಶ್ ಮುಚ್ಚಲ್: ವೈರಲ್ ಪೋಸ್ಟ್

ಒಂದೇ ತಿಂಗಳಲ್ಲಿ ಭಾರತ ಮಹಿಳೆಯರಿಂದ ಮೂರನೇ ವಿಶ್ವಕಪ್: ಭಾರತ ಈಗ ಕಬಡ್ಡಿ ಚಾಂಪಿಯನ್

ಮುಂದಿನ ಸುದ್ದಿ
Show comments